ಡಾ.ರಾಜ್‍ಕುಮಾರ್ ರಸ್ತೆಗೆ 27ರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ಪದ್ಮಭೂಷಣ ಡಾ.ರಾಜ ಕುಮಾರ್ ರಸ್ತೆಗೆ 27ನೇ ವರ್ಷದ ಸಂಭ್ರಮ. ನಗರದ ಪ್ರತಿಷ್ಠಿತ ಬಡಾವಣೆ ಎಂದೇ ಹೆಸರಾದ ರಾಜಾಜಿನಗರದ ಕರ್ನಾಟಕ ಸಾಬೂನು ಕಾರ್ಖಾನೆಯಿಂದ ಪ್ರಸನ್ನ ವೃತ್ತದವರೆಗೂ ಇರುವ 6 ಕಿ.ಮೀ. ಉದ್ದದ 80 ಅಡಿ ಮುಖ್ಯರಸ್ತೆಗೆ ಕನ್ನಡದ ಮೇರು ನಟ ಪದ್ಮಭೂಷಣ ಡಾ.ರಾಜ್ ಕುಮಾರ್ ರಸ್ತೆ ಎಂದು ನಾಮಕರಣವಾಗಿ ಜ.27ಕ್ಕೆ 26 ವರ್ಷಗಳು ಪೂರ್ಣಗೊಂಡಿತು.

1984 ಜನವರಿ 27ರಂದು ಈ ರಸ್ತೆಗೆ ಪದ್ಮಭೂಷಣ ಡಾ.ರಾಜಕುಮಾರ್ ರಸ್ತೆ ಎಂದು ಹೆಸರಿಡಲಾಯಿತು. ಅಂದು ರಸ್ತೆಯ ಎಲ್ಲಾ ಅಂಗಡಿ, ಮನೆ, ವಾಣಿಜ್ಯ ಕಟ್ಟಡಗಳ ಬಳಿ ನಾಮಫಲಕ, ನಾಡದ್ವಜ ಹಾಗೂ ರಾಜ್ ರವರ ಭಾವಚಿತ್ರವನ್ನು ತಳಿರು ತೋರಣ ಹೂವಿನ ಕಮಾನುಗಳು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು.

ಅಂದು ನಡೆದ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ರಾಜ್ ರವರ ಹಾಡುಗಳೊಂದಿಗೆ ವಿವಿಧ ವಾದ್ಯ ಮೇಳ ಹಬ್ಬದ ಕಳೆ ಕಟ್ಟಿದರೆ, ಸ್ವಯಂ ಪ್ರೇರಿತವಾಗಿ ಅಭಿಮಾನಿಗಳು, ಸ್ಥಳೀಯರು ಎಲ್ಲಾಡೆ ಸಿಹಿ ಮತ್ತು ಅನ್ನದಾನ ವಿತರಿಸಿ ಹರ್ಷ ವ್ಯಕ್ತ ಪಡಿಸಿದ್ದರು.

ಅಂದು ನಡೆದ ಅದ್ದೂರಿ ನಾಡಹಬ್ಬದ ಸಮಾರಂಭದಲ್ಲಿ ರಾಜಕೀಯ ಗಣ್ಯರು, ಕಲಾವಿದರು, ಪಾಲಿಕೆ ಸದಸ್ಯರು, ಸಾಹಿತಿಗಳು, ಉದ್ದಿಮೆಗಳು, ಪೊಲೀಸ್ ಸಿಬ್ಬಂದಿ, ಆಟೋ ಚಾಲಕರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿ ದೇವರುಗಳು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಸಾಕ್ಷೀಕರಿಸಿದ್ದರು.

Facebook Comments