ಭಯೋತ್ಪಾದನೆ ನಿಗ್ರಹಕ್ಕೆ ವಿಶ್ವ ಸಮುದಾಯದ ಸಾಥ್‍ಗೆ ರಾಜನಾಥ್ ಕರೆ 

ಈ ಸುದ್ದಿಯನ್ನು ಶೇರ್ ಮಾಡಿ
ಬ್ಯಾಂಕಾಕ್, ನ.19-  ಭಯೋತ್ಪಾದನೆ ನಿಗ್ರಹಕ್ಕೆ ಜಾಗತಿಕ ಸಮುದಾಯ ಕೈ ಜೋಡಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‍ನಲ್ಲಿ ನಡೆದ 6ನೆ ಆಸಿಯಾನ್ ರಕ್ಷಣಾ ಸಚಿವರ ಸಭೆ (ಎಡಿಎಂಎಂಪ್ಲಸ್) ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದಕ ಸುರಕ್ಷಿತ ತಾಣಗಳನ್ನು ನಿರ್ಮೂಲನೆ ಮಾಡಲು ಹಾಗೂ ಅದರ ವ್ಯವಸ್ಥಿತ ಜಾಲಗಳನ್ನು ಮುಖ್ಯವಾಗಿ ಹಣಕಾಸು ನೆರವು ತಡೆಯುವುದರ ಮೂಲಕ ಸುಸ್ಥಿರ ಪ್ರಾದೇಶಿಕ ಭದ್ರತೆ ಕಾಪಾಡಿಕೊಳ್ಳುವಂತೆ ಸಲಹೆ ಮಾಡಿದರು.
ಗಡಿಯಂಚಿನ ಭಯೋತ್ಪಾದನೆ ತುಂಬಾ ಘೋರವಾಗಿದ್ದು, ಕೆಲ ದೇಶಗಳು ಪ್ರಾದೇಶಿಕ ಭದ್ರತೆಯನ್ನು ದುರ್ಬಲಗೊಳಿಸುವ ಉದ್ದೇಶದೊಂದಿಗೆ ತಮ್ಮದೇ ರಾಜಕೀಯ ಗುರಿಗಳನ್ನು ಸಾಸಲು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವುದು ದುರಂತ ಎಂದು ಬಣ್ಣಿಸಿದರು.
ಎಲ್ಲಾ ಸ್ವರೂಪದ ಭಯೋತ್ಪಾದನಾ ಚಟುವಟಿಕೆಗಳು ಮತ್ತು ಭಯೋತ್ಪಾದಕರ ಕುಕೃತ್ಯಗಳನ್ನು ಮಟ್ಟ ಹಾಕಲು ಅಂತಾರಾಷ್ಟ್ರೀಯ ಸಮುದಾಯ ಕೈ ಜೋಡಿಸಿ ಈ ನಿಟ್ಟಿನಲ್ಲಿ ಸಾಮೂಹಿಕವಾಗಿ ಹೋರಾಡುವಂತೆ ಅವರು ಸಲಹೆ ಮಾಡಿದರು.
Facebook Comments