ಸಂಸತ್ ಕಲಾಪಗಳಿಗೆ ಬಿಜೆಪಿ ಸಂಸದರ ಗೈರು, ರಾಜನಾಥ್‍ಸಿಂಗ್ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.3-ಸಂಸತ್ ಕಲಾಪಗಳಿಗೆ ಬಿಜೆಪಿ ಸಂಸದರು ಅನುಪಸ್ಥಿತರಾಗುತ್ತಿರುವ ವಿಷಯ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಇಂದು ಪ್ರಸ್ತಾಪವಾಗಿ ವರಿಷ್ಠರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜ್‍ನಾಥ್‍ಸಿಂಗ್ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳಲ್ಲಿ ಬಿಜೆಪಿ ಸದಸ್ಯರ ಗೈರು ಹಾಜರಿ ಹೆಚ್ಚಾಗುತ್ತಿದೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಹ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಪೌರತ್ವ (ತಿದ್ದುಪಡಿ)ಕಾಯ್ದೆ ಜಾರಿಯ ಮಹತ್ವವನ್ನು ಸಭೆಯಲ್ಲಿ ಪ್ರತಿಪಾದಿಸಿದ ರಾಜ್‍ನಾಥ್‍ಸಿಂಗ್, ಇದರಿಂದ ಸಮಾನತೆಗೆ ಅನುವು ಮಾಡಿಕೊಡುತ್ತದೆ ಮತ್ತು ಅಕ್ರಮ ವಲಸೆಗಳನ್ನು ತಡೆಗಟ್ಟುತ್ತದೆ ಎಂದರು.

ಜಾರ್ಖಂಡ್‍ನಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರಕ್ಕಾಗಿ ತೆರಳಿರುವ ಕಾರಣ ಪ್ರಧಾನಿ ಮೋದಿ ಇಂದಿನ ಬಿಜೆಪಿ ಸಂಸದೀಯ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ. ನಾತೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಬಣ್ಣಿಸಿ ವಿವಾದಕ್ಕೆ ಗುರಿಯಾಗಿರುವ ಸಂಸದೆ ಪ್ರಜ್ಞಾಠಾಕೂರ್ ಅವರನ್ನು ಸಭೆಯಿಂದ ನಿಷೇಧಿಸಲಾಗಿದೆ.

Facebook Comments