ಭಾರತ ವಸುದೈವ ಕುಟುಂಬಕಂ: ರಾಜನಾಥ್ ಸಿಂಗ್ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.22- ಭಾರತವನ್ನು ವಸುದೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ) ಎಂದು ಬಣ್ಣಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ವಧರ್ಮಗಳ ಸಮಾನತೆಯನ್ನು ಪ್ರತಿಪಾದಿಸುತ್ತಿರುವ ನಮ್ಮದು ವಿಶ್ವದಲ್ಲೇ ಅತ್ಯಂತ ಅನುಕರಣೀಯ ಜಾತ್ಯತೀತ ರಾಷ್ಟ್ರ ಎಂದು ಹೇಳಿದ್ದಾರೆ.  ದೆಹಲಿಯಲ್ಲಿ ಇಂದು ಎನ್‍ಸಿಸಿ ಗಣರಾಜ್ಯೋತ್ಸವ ಶಿಬಿರ(ರಿಪಬ್ಲಿಕ್ ಡೇ ಕ್ಯಾಂಪ್)ದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ನಮ್ಮ ಜಾತ್ಯತೀತ ರಾಷ್ಟ್ರವಾಗಿದ್ದರೆ, ಪಾಕಿಸ್ತಾನ ಧಾರ್ಮಿಕ ಅಂಧಶ್ರದ್ಧೆಯ ದೇಶ. ಅಮೆರಿಕ ಕೂಡ ಸೈದ್ದಾಂತಿಕ ನಿಲುವಿನ ಒಂದು ರಾಷ್ಟ್ರ ಎಂದು ಟೀಕಿಸಿದರು.

ವಸುದೈವ ಕುಟುಂಬಕಂ ಎಂಬಂತೆ ನಮ್ಮ ಭಾರತದಲ್ಲಿ ಇಡೀ ವಿಶ್ವದ ಒಂದು ಕುಟುಂಬವೇ ನೆಲೆಸಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನರು, ಬೌದ್ಧರು, ಸಿಖರು ಹೀಗೆ ಎಲ್ಲ ಧರ್ಮದವರು ನೆಲೆಸಿದ್ದಾರೆ. ಹೀಗಾಗಿ ನಮ್ಮದು ಸರ್ವಧರ್ಮವನ್ನು ಗೌರವಿಸುವ ಮಾದರಿ ಜಾತ್ಯತೀತ ರಾಷ್ಟ್ರ. ಆದರೆ ನಮ್ಮ ನೆರೆಯ ರಾಷ್ಟ್ರ ತಾನು ಧರ್ಮಶ್ರದ್ಧೆಯ ದೇಶವನ್ನು ಜಗಜ್ಜಾಹೀರಗೊಳಿಸಿದೆ ಎಂದು ಟೀಕಿಸಿದರು.

ನಾವು ಎಲ್ಲ ಧರ್ಮದವರನ್ನು, ಎಲ್ಲಾ ಜನಾಂಗದವರನ್ನು ಗೌರವಿಸುತ್ತೇವೆ. ಎಲ್ಲರನ್ನು ಸರಿಸಮಾನರಾಗಿ ನೋಡುವ ಔದಾರ್ಯ ಮತ್ತು ಉದಾತ್ತ ಮನೋಭಾವ ನಮ್ಮಲ್ಲಿದೆ. ಜಾತೀಯತೆ ಎಂಬ ತತ್ವದಲ್ಲಿ ನಮಗೆ ನಂಬಿಕೆಯಿಲ್ಲ. ಬದಲಿಗೆ ಜಾತ್ಯತೀತತೆ ನಮ್ಮ ತತ್ವವಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರು.

ಜಮ್ಮುಕಾಶ್ಮೀರದ ಮಕ್ಕಳು ಕೂಡ ದೇಶ ಭಕ್ತರಾಗಿದ್ದಾರೆ. ಆದರೆ ಕೆಲವೊಮ್ಮೆ ಅವರ ದಿಕ್ಕು ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಆಸ್ಪದ ನೀಡಬಾರದು. ಕಾಶ್ಮೀರ ಕಣಿವೆ ಪ್ರಾಂತ್ಯದ ಮಕ್ಕಳು ಸಹ ನ್ಯಾಷನಲ್ ಕೆಡೆಟ್ ಕಾಪ್ರ್ಸ್(ಎನ್‍ಸಿಸಿ)ಗೆ ಸೇರುವಂತೆ ಎಂದು ಅವರು ಸಲಹೆ ಮಾಡಿದರು.

Facebook Comments