ಪಾಕ್ ಮತ್ತು ಚೀನಾಗೆ ಪರೋಕ್ಷವಾಗಿ ವಾರ್ನ್ ಮಾಡಿದ ರಾಜನಾಥ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಅಂಬಾಲಾ (ಹರ್ಯಾಣ), ಸೆ.10-ದೇಶದ ಸೌರ್ವಭೌಮತ್ವ ವಿಷಯದಲ್ಲಿ ರಾಜೀ ಪ್ರಶ್ನಯೇ ಇಲ್ಲ ಎಂದು ಪುನರುಚ್ಚರಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಗರಿಷ್ಠ ಅದ್ಯತೆ ಎಂದು ಪ್ರತಿಪಾದಿಸಿದ್ದಾರೆ.

ದೇಶದ ಗಡಿಗಳ ರಕ್ಷಣೆ ಯಾವುದೇ ಕ್ರಮಕ್ಕೂ ನಾವು ಸಿದ್ದ ಎಂದು ಕಲಹಪ್ರಿಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಅವರು, ಇಂಡೋ-ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ನಾವು ಸಂಪೂರ್ಣ ಸಿದ್ದ ಎಂದು ಘೋಷಿಸಿದರು.

ಹರ್ಯಾಣದ ಅಂಬಾಲ ವಾಯು ನೆಲೆಯಲ್ಲಿ ಇಂದು ಬೆಳಗ್ಗೆ ನಡೆದ ವಿಶೇಷ ಸಮಾರಂಭದಲ್ಲಿ ಫ್ರಾನ್ಸ್‍ನ ಐದು ರಫೇಲ್ ಸಮರ ವಿಮಾನಗಳು ಐಎಎಫ್‍ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡ ನಂತರ ಮಾತನಾಡಿದ ಅವರು ಇದೊಂದು ಐತಿಹಾಸಕ ಸಂಗತಿ ಎಂದು ಬಣ್ಣಿಸಿದರು.

ಭಾರತೀಯ ವಾಯು ಪಡೆಗೆ ರಫೇಳ್ ಫೈಟರ್‍ಜೆಟ್‍ಗಳು ಸೇರ್ಪಡೆಯಾಗಿರುವುದರಿಂದ ಭಾರತ ಮತ್ತು ಫ್ರಾನ್ಸ್ ನಡುವಣ ಸಂಬಂಧ ಮತ್ತಷ್ಟು ಬಲಗೊಂಡಿದೆ. ಭಯೋತ್ಪಾದನೆ ನಿರ್ಮೂಲನೆ ಸೇರಿದಂತೆ ಅಂತಾರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ಉಭಯ ದೇಶಗಳ ನಿಲುವು ಒಂದೆ ಆಗಿದೆ ಎಂದು ಅವರು ಹೇಳಿದರು.

ಫ್ರಾನ್ಸ್ ರಕ್ಷಣಾ ಸಚಿವೆ ಪ್ರೋರೆನ್ಸ್ ಪರ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಗಮನಸೆಳೆದರು. ಭಾರತದ ಮೂರು ಸಶಸ್ತ್ರ ಪಡೆಗಳ ಮಹಾ ದಂಡನಾಯಕ (ಸಿಡಿಎಸ್) ಜನರಲ್ ಬಿಪಿನ್ ರಾವ್, ಭಾರತೀಯ ವಾಯು ಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ, ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ(ಡಿಆರ್‍ಡಿಒ) ಕಾರ್ಯದರ್ಶಿ ಡಾ. ಸತೀಶ್ ರೆಡ್ಡಿ ಮತ್ತು ರಕ್ಷಣಾ ಇಲಾಖೆಯ ಉನ್ನತಾಧಿಕಾರಿಗಳು ಸಮಾರಂಭದಲ್ಲಿ ಮಾತನಾಡಿದರು.

ಫ್ರೆಂಚ್ ನಿಯೋಗವನ್ನು ಭಾರತದ ಫ್ರಾನ್ಸ್ ರಾಯಭಾರಿ ಎಮ್ಮಾನುಯೆಲ್ ಲೆನೈನ್, ಏರ್ ಜನರಲ್ ಎರಿಕ್ ಅಟಲೆಟ್ ಹಾಗೂ ಫ್ರಾನ್ಸ್ ವಾಯುಪಡೆಯ ಮುಖ್ಯಸ್ಥರು ಮತ್ತು ಉನ್ನತಾಧಿಕಾರಿಗಳು ಪ್ರತಿನಿಧಿಸಿದ್ದರು.

ಇದಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫ್ರಾನ್ಸ್‍ನ ತಮ್ಮ ಸಹವರ್ತಿ ಪ್ಲೊರೆನ್ಸ್ ಪರ್ಲಿ ಅವರನ್ನು ಬೇಟಿ ಮಾಡಿ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಿದರು.

Facebook Comments