“ಗಡಿಯಲ್ಲಿ ಶಾಂತಿಗಾಗಿ ದ್ವಿಪಕ್ಷೀಯ ಒಪ್ಪಂದಕ್ಕೆ ಭಾರತ-ಚೀನಾ ಗೌರವಿಸುತ್ತಿವೆ” : ರಾಜನಾಥ್‍ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.17- ಗಡಿ ಪ್ರದೇಶದಲ್ಲಿ ಪರಸ್ಪರ ಶಾಂತಿ ಸ್ಥಾಪನೆಗಾಗಿ ಆಗಿರುವ ದ್ವಿಪಕ್ಷೀಯ ಒಪ್ಪಂದಗಳನ್ನು ಭಾರತ ಮತ್ತು ಚೀನಾ ಗೌರವಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್‍ಸಿಂಗ್ ತಿಳಿಸಿದ್ದಾರೆ.

ಭಾರತ-ಚೀನಾ ಗಡಿ ಪ್ರದೇಶದಲ್ಲಿನ ಪ್ರಸ್ತುತ ಪರಿಸ್ಥಿತಿ ಕುರಿತು ಲೋಕಸಭೆಯಲ್ಲಿಂದು ಹೇಳಿಕೆ ನೀಡಿದ ಸಚಿವರು ಎರಡೂ ದೇಶಗಳ ನಡುವೆ ಉದ್ಭವಿಸಿದ ದೋಕ್ಲಾಂ ಬಿಕ್ಕಟ್ಟಿನ ನಂತರ ಭಾರತ ಮತ್ತು ಚೀನಾ ಗರಿಷ್ಠ ಸಂಯಮ ಕಾಯ್ದುಕೊಂಡಿವೆ ಎಂದು ಹೇಳಿದರು.

ಎರಡೂ ದೇಶಗಳ ನಡುವೆ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಈಗಾಗಲೇ ಆಗಿರುವ ಒಡಂಬಡಿಕೆಗಳನ್ನುಎರಡೂ ದೇಶಗಳು ಗೌರವಿಸುತ್ತಿದ್ದು, ಗಡಿ ಭಾಗದಲ್ಲಿ ಸುವ್ಯವಸ್ಥೆ ನೆಲೆಗೊಂಡಿದೆ ಎಂದು ಹೇಳಿದರು.

ಉಹಾನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಿ ಅಧ್ಯಕ್ಷ ಕ್ಸಿ ಜಿಂಗ್‍ಪಿನ್ ನಡುವೆ ನಡೆದ ಮಾತುಕತೆ ಫಲಪ್ರದವಾಗಿದ್ದು, ಗಡಿಯಲ್ಲಿ ಉಭಯ ದೇಶಗಳ ನಡುವೆ ಶಾಂತಿ, ಪ್ರಶಾಂತತೆ ಮತ್ತು ನೆಮ್ಮದಿ ನೆಲೆಸಿದೆ. ಅಲ್ಲದೆ, ಒಪ್ಪಂದಗಳನ್ನು ಪರಸ್ಪರ ಗೌರವಿಸಲಾಗುತ್ತಿದೆ ಎಂದು ರಾಜನಾಥ್‍ಸಿಂಗ್ ತಿಳಿಸಿದರು.

Facebook Comments