ಜೈವಿಕ ಭಯೋತ್ಪಾದನೆ ವಿರುದ್ಧ ಹೋರಾಡಲು ಸಶಸ್ತ್ರ ಪಡೆಗಳಿಗೆ ರಾಜನಾಥ್ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.12-ಇಂದಿನ ಸನ್ನಿವೇಶದಲ್ಲಿ ಜೈವಿಕ ಭಯೋತ್ಪಾದಕರೆ(ಬಯೋ ಟೆರ್ರರಿಸಂ0 ವಾಸ್ತವ ಆತಂಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಪಿಡುಗಿನ ವಿರುದ್ದದ ಹೋರಾಟದಲ್ಲಿ ಸಶಸ್ತ್ರ ಪಡೆಗಳು ಮತ್ತು ವೈದ್ಯಕೀಯ ಸೇವೆಗಳು ಮುಂಚೂಣಿಯಲ್ಲಿ ಇರಬೇಕೆಂದು ಕರೆ ನೀಡಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ(ಎಸ್‍ಸಿಒ) ಪ್ರಥಮ ಮಿಲಿಟರಿ ಮೆಡಿಸಿನ್ ಸಮಾವೇಶದಲ್ಲಿ ಸಚಿವರು ಮಾತನಾಡಿದರು.

ಜೈವಿಕ ಭಯೋತ್ಪಾದನೆ ಎಂಬುದು ಪ್ಲೇಗ್ ಅಂಟು ರೋಗದಲ್ಲಿ ಉಲ್ಬಣಗೊಂಡಿದ್ದು, ಎಲ್ಲೆಡೆ ವ್ಯಾಪಿಸುತ್ತಿದೆ. ಇದನ್ನು ನಿರ್ಮೂಲನೆ ಮಾಡುವ ಅಗತ್ಯವಿದೆ ಎಂದು ಸಿಂಗ್ ಹೇಳಿದರು. ಸಶಸ್ತ್ರ ಪಡೆಗಳು ಮತ್ತು ಅದರ ವೈದ್ಯಕೀಯ ಸೇವೆಗಳು ಈ ಹೆಮ್ಮಾರಿ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ಇರಬೇಕು ಎಂದು ಅವರು ಕರೆ ನೀಡಿದರು.

ಬಯೋ ಟೆರ್ರರಿಸಂ-ಭಯೋತ್ಪಾದನೆಯ ಒಂದು ಸ್ವರೂಪವಾಗಿದ್ದು, ಮಾನವರ ವಿರುದ್ಧ ಸೋಂಕು ವೈರಾಣುಗಳು ಅಥವಾ ಹಾನಿಕಾರಕ ಜೈವಿಕ ಧಾತುಗಳನ್ನು ಅಸ್ತ್ರವನ್ನಾಗಿ ಬಳಸಿ ಸಾಮೂಹಿಕವಾಗಿ ಕೊಲ್ಲುವ ಕ್ರೂರ ರೂಪವೇ ಜೈವಿಕ ಭಯೋತ್ಪಾದನೆ.

Facebook Comments