ವಿಶ್ವದ ಯಾವುದೇ ಶಕ್ತಿಗೆ ಭಾರತ ಸೇನೆಯನ್ನು ತಡೆಯಲು ಸಾಧ್ಯವಿಲ್ಲ : ರಾಜನಾಥ್ ಸಿಂಗ್ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.17- ಲಡಾಕ್ ಪ್ರಾಂತ್ಯದಲ್ಲಿನ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಗಡಿ ರಕ್ಷಣೆಗೆ ನಮ್ಮ ಯೋಧರು ಕಂಕಣಬದ್ಧರಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುನರುಚ್ಚರಿಸಿದ್ದಾರೆ.

ಲಡಾಕ್ ಪಹರೆಗೆ ನಿಂತಿರುವ ನಮ್ಮ ಯೋಧರನ್ನು ತಡೆಗಟ್ಟಲು ಜಗತ್ತಿನ ಯವುದೇ ಶಕ್ತಿಯಿಂದಲೂ ಸಾಧ್ಯವಾಗದು ಎಂದು ಚೀನಾಗೆ ಮತ್ತೊಮ್ಮೆ ಖಡಕ್ ವಾರ್ನಿಂಗ್ ನೀಡಿದರು.

ರಾಜ್ಯಸಭೆಯಲ್ಲಿಂದು ಲಡಾಕ್ ಗಡಿ ಬಿಕ್ಕಟ್ಟು ಮತ್ತು ಚೀನಾ ಜತೆಗಿನ ಸಂಘರ್ಷ ಕುರಿತ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದೇಶದ ಗಡಿ ರಕ್ಷಣೆ ಮತ್ತು ಸಾರ್ವಭೌಮತ ವಿಷಯದಲ್ಲಿ ಯಾವುದೇ ರಾಜಿ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.

ಲಡಾಕ್ ಪ್ರಾಂತ್ಯದ ಗಡಿ ರಕ್ಷಣೆಗೆ ನಮ್ಮ ಯೋಧರು ಸರ್ವ ಸನ್ನದ್ಧರಾಗಿದ್ದಾರೆ. ಗಡಿ ಭಾಗದ ಪಹರೆಯಿಂದ ನಮ್ಮ ಯೋಧರನ್ನು ತಡೆಗಟ್ಟಲು ಪ್ರಪಂಚದ ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಾವು ಶಾಂತಿ ಮಾತುಕತೆಗೆ ಯಾವಾಗಲೂ ಬದ್ಧ. ಹಾಗೆಯೇ ಚೀನಿ ಸೇನೆಯ ಯಾವುದೇ ದುಸ್ಸಾಹಾಸವನ್ನು ಎದುರಿಸಲು ಸಿದ್ಧ ಎಂದು ರಾಜನಾಥ್‍ಸಿಂಗ್ ತಿಳಿಸಿದರು.

Facebook Comments

Sri Raghav

Admin