ಪೂರ್ವ ಲಡಾಕ್‍ನಲ್ಲಿ ಭದ್ರತಾ ಸ್ಥಿತಿಗತಿ ಪರಾಮರ್ಶಿಸಿದ ರಾಜನಾಥ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.23- ಭಾರತ ಮತ್ತು ಚೀನಾ ನಡುವಿನ ಭಾರೀ ಸಂಘರ್ಷಕ್ಕೆ ಕಾರಣವಾದ ಪೂರ್ವ ಲಡಾಕ್‍ನಲ್ಲಿ ಭದ್ರತಾ ಸ್ಥಿತಿಗತಿಗಳು ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷಿತ ಕ್ರಮಗಳ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಹತ್ವದ ಸಭೆ ನಡೆಸಿದ್ದಾರೆ.

ಪೂರ್ವ ಲಡಾಕ್‍ನಿಂದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಆ ದೇಶದ ಮೇಲೆ ಮತ್ತಷ್ಟು ಒತ್ತಡ ಹೇರುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವದ್ದಾಗಿದೆ.

ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಭದ್ರತಾ ಸಲಹೆಗಾರ ಅಜಿತ್ ಧವೋಲ್ ಭಾರತದ ಮೂರು ಶಸ್ತ್ರಸ್ತ್ರ ಪಡೆಗಳ ಮಹಾದಂಡ ನಾಯಕ ಜನರಲ್ ಬಿಪಿನ್ ರಾವತ್, ಭೂಸೇನೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ, ನೌಕಾದಳದ ಮುಖ್ಯಸ್ಥ ಚೀಫ್ ಅಡ್ಮಿರಲ್ ಕರಮ್‍ವೀರ್ ಸಿಂಗ್ ಹಾಗೂ ವಾಯುಪಡೆ ಮುಖ್ಯಸ್ಥ ಏರ್‍ಛೀಫ್ ಮಾರ್ಷಲ್ ರಾಕೇಶ್‍ಕುಮಾರ್ ಸಿಂಗ್ ಬದೌರಿಯ ಹಾಗೂ ರಕ್ಷಣಾ ಇಲಾಖೆಯ ಉನ್ನತ ಅಕಾರಿಗಳು ಭಾಗವಹಿಸಿದ್ದರು.

ಲಡಾಕ್ ಪ್ರಾಂತ್ಯದಲ್ಲಿ ಚೀನಾ ಮತ್ತೆ ತಗಾದೆ ತೆಗೆಯದಂತೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳು, ಪ್ರಸ್ತುತ ಅಲ್ಲಿನ ಸ್ಥಿತಿಗತಿ ಹಾಗೂ ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕುರಿತು ಈ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಧವೋಲ್, ಭಾರತೀಯ ಸೇನಾಪಡೆಗಳ ಮಹಾದಂಡ ನಾಯಕ ಬಿಪಿನ್ ರಾವತ್ ಮತ್ತಿತರರು ಕೇಂದ್ರ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪೂರ್ವ ಲಡಾಕ್‍ನಿಂದ ಚೀನಾ ಸೇನಾ ಪಡೆ ಸಂಪೂರ್ಣವಾಗಿ ಹಿಂದಕ್ಕೆ ಸರಿಯುವ ತನಕ ಕಮ್ಯುನಿಸ್ಟ್ ದೇಶದ ಮೇಲೆ ನಿರಂತರ ಒತ್ತಡ ಹೇರಬೇಕು. ಕಮಾಂಡರ್ ಮಟ್ಟದ ಮಾತುಕತೆ ಸೇರಿದಂತೆ ಅಗತ್ಯವಾದ ಎಲ್ಲ ಕ್ರಮಗಳನ್ನು ಅನುರಿಸಲು ಸಭೆಯಲ್ಲಿ ಚರ್ಚಿಸಲಾಯಿತು.

ಮೇ 5ರಂದು ಚೀನಾ ಪಡೆಗಳು ಲಡಾಕ್‍ನಲ್ಲಿ ತನ್ನ ಚಟುವಟಿಕೆಗಳನ್ನು ಚುರುಕುಗೊಳಿಸಿ ಗಡಿ ಕ್ಯಾತೆ ತೆಗೆದ ನಂತರ ಸಂಘರ್ಷ ತಲೆದೋರಿ ಜೂನ್‍ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಹಿಂಸಾತ್ಮಕ ಸಂಘರ್ಷದಲ್ಲಿ ಭಾರತದ 20 ಸೇನಿಕರು ಹುತಾತ್ಮರಾಗಿದ್ದರು.

Facebook Comments

Sri Raghav

Admin