ಎಲ್‍ಒಸಿಯಲ್ಲಿ ಇಂಡೋ-ಚೀನಾ ಉದ್ವಿಗ್ನತೆ ಇಲ್ಲ : ರಾಜನಾಥ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೂಮ್‍ಲಾ(ಅರುಣಾಚಲಪ್ರದೇಶ) :  ಭಾರತ-ಚೀನಾ ಗಡಿ ಭಾಗದಲ್ಲಿರುವ ವಾಸ್ತವ ನಿಯಂತ್ರಣರೇಖೆ(ಎಲ್‍ಎಸಿ)ಯಲ್ಲಿ ಉಭಯ ದೇಶಗಳ ನಡುವೆ ಯಾವುದೇ ಉದ್ವಿಗ್ನತೆ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಬೂಮ್‍ಲಾ ಪಾಸ್‍ಗೆ ಇಂದು ಭೇಟಿ ನೀಡಿ ಗಡಿಭಾಗದ ಭಾರತೀಯ ಯೋಧರನ್ನು ರಕ್ಷಣಾ ಸಚಿವರು ಭೇಟಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜನಾಥ್ ಸಿಂಗ್, ಇಂಡೋ-ಚೀನಾ ಗಡಿ ಭಾಗದಲ್ಲಿ ಉಭಯ ದೇಶಗಳ ಸೇನೆ ಗರಿಷ್ಠ ಸಂಯಮ ಕಾಯ್ದುಕೊಂಡಿದೆ. ಯೋಧರು ಅತ್ಯಂತ ಸಹನೆ ಮತ್ತು ತಾಳ್ಮೆ ವಹಿಸಿದ್ದಾರೆ. ಹೀಗಾಗಿ ಎಲ್‍ಎಸಿನಲ್ಲಿ ಯಾವುದೇ ಆತಂಕಕಾರಿ ಉದ್ವಿಗ್ನ ವಾತಾವರಣವಿಲ್ಲ ಎಂದು ಅವರು ಹೇಳಿದರು.

ಭಾರತ-ಚೀನಾ ಗಡಿಭಾಗದಲ್ಲಿ ಎಲ್ಲ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಭಾರತೀಯ ಸೇನೆಯ ಕಾರ್ಯತತ್ಪರತೆಯನ್ನು ರಕ್ಷಣಾ ಸಚಿವರು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಅವರು ಪರಮವೀರಚಕ್ರ ಪ್ರಶಸ್ತಿ ಪುರಸ್ಕøತ ಹುತಾತ್ಮ ಸುಬೇದಾರ್ ಜೋಗಿಂದರ್ ಸಿಂಗ್ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

Facebook Comments