“ಶ್ರೀಮಂತ್‍ಪಾಟೀಲ್ ರಾಜಕಾರಣಿ ಅಲ್ಲ, ಬಿಜಿನೆಸ್ ಮೆನ್”

ಈ ಸುದ್ದಿಯನ್ನು ಶೇರ್ ಮಾಡಿ

ಊಗಾರ್‍ಖುರ್ದ್, ನ.21- ಶ್ರೀಮಂತ್‍ಪಾಟೀಲ್ ರಾಜಕಾರಣಿ ಅಲ್ಲ, ಅವರೊಬ್ಬ ಬಿಜಿನೆಸ್ ಮೆನ್. 14 ತಿಂಗಳಾದರೂ ಕ್ಷೇತ್ರದತ್ತ ತಲೆ ಹಾಕಿಲ್ಲ. ಅವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜುಕಾಗೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಗವಾಡ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ.

ಶೇ.90ರಷ್ಟು ಜನ ನನ್ನನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರಕಾಶ್ ಹುಕ್ಕೇರಿ ಅವರು ಪ್ರಚಾರಕ್ಕೆ ಬರುತ್ತಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಬಂದಿಲ್ಲ ಎಂದು ತಿಳಿಸಿದರು. ಈ ಹಿಂದೆ ಅಭಿವೃದ್ಧಿ ನಿರೀಕ್ಷೆ ಹಿನ್ನೆಲೆಯಲ್ಲಿ ಕ್ಷೇತ್ರದ ಜನ ಪಾಟೀಲ್ ಅವರನ್ನು ಆಯ್ಕೆ ಮಾಡಿದ್ದರು. ಆದರೆ, ಅವರು ಕ್ಷೇತ್ರದ ಕಡೆ ತಲೆಯನ್ನೇ ಹಾಕಲಿಲ್ಲ.

ಅವರಿಗೆ ಕ್ಷೇತ್ರದ ಅಭಿವೃದ್ಧಿಯ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಕಾಂಗ್ರೆಸ್‍ನಿಂದ ಬಂಡಾಯವಾಗಿ ಸ್ಪರ್ಧಿಸಿರುವ ವಿವೇಕ್ ಶೆಟ್ಟಿ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ರಾಜುಕಾಗೆ, ಆತ ನನ್ನ ಮುಂದೆ ಬಚ್ಚಾ ಎಂದು ರೇಗಿದರು.

Facebook Comments