ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಗದ್ದಲ, ರಾಜ್ಯಸಭೆ ಕಲಾಪ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Rajyasabha--01
ನವದೆಹಲಿ, ಜು.20-ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ವಿಷಯ ರಾಜ್ಯಸಭೆಯಲ್ಲಿ ಇಂದು ಮತ್ತೆ ಪ್ರತಿಧ್ವನಿಸಿ ಗದ್ದಲದ ವಾತಾವರಣಕ್ಕೆ ಸಾಕ್ಷಿಯಾಯಿತು. ಇದರಿಂದಾಗಿ ಸಂಸತ್ತಿನ ಮೇಲ್ಮನೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಸಂಸತ್ತಿನ ಮುಂಗಾರು ಅಧಿವೇಶನದ ಮೂರನೇ ದಿನದ ಕಲಾಪ ರಾಜ್ಯಸಭೆಯಲ್ಲಿ ಆರಂಭವಾಗುತ್ತಿದ್ದಂತೆ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸದಸ್ಯ ಸಿ.ಎಂ.ರಮೇಶ್ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಪ್ಯಾಕೇಜ್ ನೀಡುವಂತೆ ಒತ್ತಾಯಿಸಿದರು. ಅಲ್ಲದೇ ಅಧಿಕೃತ ಪತ್ರಿಕಾ ಹೇಳಿಕೆಗೆ ಸಂಬಂಧಿಸಿದ ವಿಷಯವನ್ನೂ ಪ್ರಸ್ತಾಪಿಸಿದರು.

ಕಾಂಗ್ರೆಸ್ ಸದಸ್ಯ ಆನಂದ್ ಶರ್ಮಾ ಅವರು ಪ್ರಶ್ನೆ ಕೇಳುವಂತೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಸೂಚಿಸಿದರು. ಆದರೆ ರಮೇಶ್ ಈ ಬಗ್ಗೆ ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದರು. ಈ ಬಗ್ಗೆ ಮಾತನಾಡಲು ನಂತರ ತಮ್ಮ ಕೊಠಡಿಗೆ ಬರುವಂತೆ ಸಭಾಪತಿ ಸೂಚಿಸಿದರೂ, ರಮೇಶ್ ಪಟ್ಟು ಸಡಿಸಲಿಲ್ಲ. ಇದರಿಂದಾಗಿ ನಾಯ್ಡು ಸದನದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

Facebook Comments

Sri Raghav

Admin