ಅಮರ್ ಸಿಂಗ್ ಅಂತ್ಯಕ್ರಿಯೆ : ಗಣ್ಯರಿಂದ ಅಂತಿಮ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.3-ಸಿಂಗಪುರ್‍ನಲ್ಲಿ ಎರಡು ದಿನಗಳ ಹಿಂದೆ ನಿಧನರಾದ ಚತುರ ರಾಜಕಾರಣಿ ಮತ್ತು ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು.

ಚಾತರ್‍ಪುರ್ ರುದ್ರಭೂಮಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ರಾಜಕೀಯ ಮುಖಂಡರು, ವಿವಿಧ ಪಕ್ಷಗಳ ನಾಯಕರು, ಕುಟುಂಬದ ಸದಸ್ಯರು ಮತ್ತು ಬಂಧುಮಿತ್ರರು ಭಾಗವಹಿಸಿ ಅಮರ್‍ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಸಿಂಗಪುರ್‍ನಿಂದ ನಿನ್ನೆ ರಾತ್ರಿ ಅವರ ಪಾರ್ಥಿವ ಶರೀರವನ್ನು ದೆಹಲಿಗೆ ವಿಶೇಷ ವಿಮಾನದಲ್ಲಿ ತರಲಾಯಿತು. ನಂತರ ಚಾತರ್‍ಪುರ್ ತೋಟದ ಮನೆಯಲ್ಲಿ ಅವರ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇರಿಸಲಾಗಿತ್ತು.

ರಕ್ಷಣಾ ಸಚಿವ ರಾಜನಾಥ ಸಿಂಗ್, ರಾಜ್ಯಸಭಾ ಸದಸ್ಯ ಜೋತಿರಾದಿತ್ಯ ಸಿಂದಿಯಾ, ಹಿರಿಯ ಅಭಿನೇತ್ರಿ ಜಯಪ್ರದಾ ಮತ್ತಿತರ ಗಣ್ಯರು ಸಮಾಜವಾದಿ ಪಕ್ಷದ ಮಾಜಿ ನಾಯಕ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

Facebook Comments

Sri Raghav

Admin