Thursday, March 28, 2024
Homeರಾಜ್ಯಕುಪೇಂದ್ರ ರೆಡ್ಡಿ ಗೆಲ್ಲಿಸುವ ಶಕ್ತಿ ಬಿಜೆಪಿ-ಜೆಡಿಎಸ್‍ಗೆ ಇಲ್ಲ; ರಿಜ್ವಾನ್

ಕುಪೇಂದ್ರ ರೆಡ್ಡಿ ಗೆಲ್ಲಿಸುವ ಶಕ್ತಿ ಬಿಜೆಪಿ-ಜೆಡಿಎಸ್‍ಗೆ ಇಲ್ಲ; ರಿಜ್ವಾನ್

ಬೆಂಗಳೂರು,ಫೆ.26- ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸದಸ್ಯ ಸ್ಥಾನಗಳಿಗೆ ನಾಳೆ ನಡೆಯುವ ಚುನಾವಣೆಯಲ್ಲಿ 5ನೇ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ಬಿಜೆಪಿ-ಜೆಡಿಎಸ್‍ಗೆ ಇಲ್ಲ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‍ನ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಬಹುದು. ಅದೇ ರೀತಿ ಬಿಜೆಪಿಯವರು ಒಬ್ಬರನ್ನು ಗೆಲ್ಲಿಸಿಕೊಳ್ಳಬಹುದು. ಆದರೂ 5 ನೇ ಅಭ್ಯರ್ಥಿಯನ್ನು ಏಕೆ ಬಿಜೆಪಿ-ಜೆಡಿಎಸ್‍ನವರು ಸ್ಪರ್ಧೆಗಿಳಿಸಿದ್ದಾರೆ ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಐಟಿ, ಇಡಿ, ಸಿಬಿಐನಿಂದ ನೋಟಿಸ್ ಕೊಡಿಸುವ, ಒತ್ತಡ ಹಾಕಿಸುವ ಪ್ರಯತ್ನ ಮಾಡಬಹುದು. ಆಪರೇಷನ್ ಕಮಲ ಮಾಡಿ ಕೋಟ್ಯಂತರ ರೂ. ಭ್ರಷ್ಟಾಚಾರದ ಹಣ ಸುರಿಯುತ್ತಾರೆ. ಇಂತಹ ಅವರ ನೀತಿ ತಂತ್ರ ಇದ್ದೇ ಇರುತ್ತದೆ. ನಮ್ಮ ಶಾಸಕರನ್ನು ಒಂದೆಡೆ ಸೇರಿಸಿ ಸಮಾಲೋಚನೆ ನಡೆಸಿ ರಾಜ್ಯಸಭೆ ಚುನಾವಣೆಯಲ್ಲಿ ಯಾವ ರೀತಿ ಮತದಾನ ಮಾಡಬೇಕು.ಯಾವ ಅಭ್ಯರ್ಥಿಗೆ ಯಾವ ಶಾಸಕರು ಮತ ಹಾಕಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಬಾರಿ 70 ಕ್ಕಿಂತ ಅಧಿಕ ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಅವರಿಗೆ ಇದು ಮೊದಲ ರಾಜ್ಯಸಭಾ ಚುನಾವಣೆಯಾಗಿದೆ. ಹೀಗಾಗಿ ಒಂದೆಡೆ ಸೇರುತ್ತಿದ್ದೇವೆ. ರಾಜ್ಯಸಭಾ ಚುನಾವಣೆ ನಂತರ ಲೋಕಸಭೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.

ನಿರುದ್ಯೋಗ ತಗ್ಗಿಸಲು ಪ್ರತಿ ವರ್ಷ ಬೃಹತ ಉದ್ಯೋಗ ಮೇಳ : ಸಿಎಂ ಸಿದ್ದರಾಮಯ್ಯ

ಲೋಕಸಭಾ ಚುನಾವಣೆಗೆ ಸ್ರ್ಪಧಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ತೀರ್ಮಾನ ಏನಾಗುತ್ತೋ ಗೊತ್ತಿಲ್ಲ. ಚುನಾವಣೆಗೆ ಸ್ರ್ಪಧಿಸಲು ಬಹಳಷ್ಟು ಜನ ಅರ್ಹರಿದ್ದಾರೆ. ಸಚಿವ ಜಮೀರ್ ಅಹಮ್ಮದ್ ಖಾನ್, ಶಾಸಕ ಎನ್.ಎ.ಹ್ಯಾರಿಸ್ ಅಲ್ಲದೆ ಹೊಸಬರು ಕೂಡ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದಲ್ಲಿ ಏನೇ ತೀರ್ಮಾನವಾದರೂ ಅದಕ್ಕೆ ಬದ್ಧರಾಗಿರುತ್ತೇವೆ. ಲೋಕಸಭೆ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಇದೆ ಎಂದರು.

RELATED ARTICLES

Latest News