ರಾಕೇಶ್ ಲಂಚ ಪ್ರಕರಣದ ತನಿಖೆ ಪೂರ್ಣಗೊಳಿಸಲು ಸಿಬಿಐಗೆ 2 ತಿಂಗಳು ಗಡುವು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.9- ಕೇಂದ್ರೀಯ ತನಿಖಾ ದಳದ ಉನ್ನತ ಅಧಿಕಾರಿಯಾಗಿದ್ದ ರಾಕೇಶ್ ಆಸ್ಥಾನ ಲಂಚ ಪ್ರಕರಣದ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ಇಂದು ಅಂತಿಮ ಗಡುವು ನೀಡಿದೆ.

ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕೆಂದು ಕೋರಿ ಸಿಬಿಐ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿಭು ಭಖ್ರೂ ಎರಡು ತಿಂಗಳೊಳಗೆ ಈ ಪ್ರಕರಣದ ತನಿಖೆಯನ್ನು ಶತಾಯ-ಗತಾಯ ಪೂರ್ಣಗೊಳಿಸಬೇಕು. ಮತ್ತೆ ಗಡುವು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಬಿಐ ಪರ ಸಾಲಿಸಿಟರ್ ಜನರಲ್ ವಿಕ್ರಂಜಿತ್ ಬ್ಯಾನರ್ಜಿ ಕೋರ್ಟ್‍ಗೆ ಹಾಜರಾಗಿ ಈ ಪ್ರಕರಣದಲ್ಲಿ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಅಗತ್ಯವಿದೆ. ಹೀಗಾಗಿ ಗಡುವು ವಿಸ್ತರಿಸುವಂತೆ ಕೋರಿದ್ದರು. ಸಿಬಿಐ ವಿಶೇಷ ನಿರ್ದೇಶಕರಾಗಿದ್ದ ಅಸ್ಥಾನ ಅವರ ಲಂಚ ಪ್ರಕರಣದಿಂದ ತನಿಖಾ ಸಂಸ್ಥೆ ಜಗಳ ಹಾದಿರಂಪವಾಗಿತ್ತು.

Facebook Comments