ಲೇಹ್ ಗಡಿ ಭಾಗಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಲೇಹ್, ಜು.17- ಚೀನಾ ಸಶಸ್ತ್ರ ಸೈನಿಕರ ಜೊತೆಗಿನ ಸಂಘರ್ಷದಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದ ಲೇಹ್ ಗಡಿ ಭಾಗಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದರು.

ಲೇಹ್, ಲಡಾಕ್ ಸೇರಿ ಜಮ್ಮು ಕಾಶ್ಮಿರ ಪ್ರದೇಶಗಳಿಗೆ ಎರಡು ದಿನಗಳ ಭೇಟಿಯನ್ನು ರಕ್ಷಣಾ ಸಚಿವರು ಇಂದಿನಿಂದ ಪ್ರಾರಂಭಿಸಿದರು. ಸಚಿವರ ಭೇಟಿ ಹಿನ್ನೆಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯ ಸಾಮಾಗ್ರಿಗಳ ಪರಿಶೀಲನೆ ನಡೆಯಿತು.

ಗಡಿಯಲ್ಲಿ ನಮ್ಮ ಸೈನಿಕರು ಕಾವಲಿನ ವೇಳೆ ಅನುಸರಿಸುವ ಸಮರಾಭ್ಯಾಸದ ಪ್ರಾತ್ಯಕ್ಷಿಕೆ ನಡೆಯಿತು. ಈ ವೇಳೆ ಸಶಸ್ತ್ರಾಗಳನ್ನು ಸಚಿವರು ಪರಿಶೀಲಿಸಿದರು. ಕಳೆದ ಜುಲೈ 15ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಮತ್ತು ಭಾರತೀಯ ಯೋಧರ ನಡುವೆ ಸಂಘರ್ಷ ನಡೆದಿತ್ತು.

ಭಾರತದ 20 ಯೋಧರ ಬಲಿದಾನವಾಗಿತ್ತು. ಚೀನಾದ ಸುಮಾರು ಸೈನಿಕರ ಜೀವ ಹಾನಿಯಾಗಿರುವುದಾಗಿಯೂ ವರದಿಯಾಗಿತ್ತು. ಅನಂತರದ ಬೆಳವಣಿಗೆಯಲ್ಲಿ ಸಂಧಾನ ಮಾತುಕತೆಗಳು ನಡೆಯುತ್ತಿವೆ.

ಎರಡು ದಿನಗಳ ಹಿಂದೆ ಸುಮಾರು 15 ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆದಿತ್ತು. ಉಭಯ ದೇಶಗಳ ಸೇನೆಯ ಪ್ರಮುಖರು ಚರ್ಚೆ ನಡೆಸಿದ್ದರು.
ಜುಲೈ 3ರಂದು ಪ್ರಧಾನಿ ನರೇಂದ್ರ ಮೋದಿ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಸೈನಿಕರ ಜೊತೆ ಸಮಾಲೋಚನೆ ನಡೆಸುವ ಮೂಲಕ ನೈತಿಕ ಸ್ಥೈರ್ಯ ತುಂಬಿದರು.

ಈಗ ರಕ್ಷಣಾ ಸಚಿವರು ಎರಡು ದಿನಗಳ ಕಾಲ ಭೇಟಿ ನೀಡಿರುವುದರಿಂದ ಸೇನೆಯಲ್ಲಿ ಹೊಸ ಉತ್ಸಾಹ ಮೂಡಿದೆ.
ಒಂದೆಡೆ ಚೀನಾದ ಜೊತೆ ಸಂದಾನ ಮಾತುಕತೆ ನಡೆಸುತ್ತಲೆ ಮತ್ತೊಂದೆಡೆ ಸಶಸ್ತ್ರಾಗಳ ಪರಿಶೀಲನೆಯೂ ನಡೆಯುತ್ತಿದೆ.

Facebook Comments

Sri Raghav

Admin