370ನೆ ವಿಧಿ ರದ್ದು ಬೆಂಬಲಿಸಿ ಅಮೆರಿಕದಲ್ಲಿ ಕಾಶ್ಮೀರಿ ಪಂಡಿತರ ರ‍್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.18- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370ನೆ ವಿಧಿ ರದ್ದುಗೊಳಿಸಿರುವ ಭಾರತ ಸರ್ಕಾರದ ಕ್ರಮಕ್ಕೆ ಬೆಂಬಲ ಸೂಚಿಸಿ ಅಮೆರಿಕದ ವಿವಿಧೆಡೆ ನೆಲೆಸಿರುವ ಕಾಶ್ಮೀರಿ ಪಂಡಿತರು ರ‍್ಯಾಲಿ ನಡೆಸಿದರು.

ರಾಜಧಾನಿ ವಾಷಿಂಗ್ಟನ್, ನ್ಯೂಯಾರ್ಕ್, ಅಟ್ಲಾಂಟ, ಕ್ಯಾಲಿಫೋರ್ನಿಯಾ, ಲಾಸ್ ಏಂಜೆಲ್ಸ್, ಸ್ಯಾನ್ ಫ್ರಾನ್ಸಿಸ್ಕೋ ಸೇರಿದಂತೆ ವಿವಿಧೆಡೆ ಕಾಶ್ಮೀರಿ ಪಂಡಿತರು 370ನೆ ವಿಧಿ ರದ್ಧತಿಗೆ ಬೆಂಬಲ ಸೂಚಿಸಿದರು.  ರ‍್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಕ್ರಮವನ್ನು ಸ್ವಾಗತಿಸಿದರು.

370ನೆ ವಿಧಿ ರದ್ದತಿಯಿಂದ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಸ್ಥಾನಮಾನ ಮತ್ತು ಘನತೆ ಮರುಕಳಿಸಲಿದೆ. ಇದು ಅತ್ಯಂತ ದಿಟ್ಟ ಕ್ರಮ ಎಂದು ರ್ಯಾಲಿ ವೇಳೆ ಕಾಶ್ಮೀರಿ ಪಂಡಿತರು ಪ್ರಶಂಸಿಸಿದರು.

Facebook Comments