ರಾಮಮಂದಿರ ಟ್ರಸ್ಟ್ ಮುಖ್ಯಸ್ಥ ಮಹಂತದಾಸ್‍ಗೆ ಕೊರೊನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಆ.13- ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ಮುಖ್ಯಸ್ಥ ಮಹಂತ ನೃತ್ಯಗೋಪಾಲ್ ದಾಸ್ (80) ಅವರಿಗೂ ಕೊರೊನಾ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ.

ಮಥುರಾ ಜಿಲ್ಲೆಯ ಮೆಡೆಂಟಾ ಆಸ್ಪತ್ರೆಯಲ್ಲಿ ದಾಸ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ವಹಿಸಿದ್ದಾರೆ.

ಈ ಸಂಬಂಧ ಜಿಲ್ಲಾ ದಂಡಾಕಾರಿ ಅವರಿಗೆ ಸೂಚನೆ ನೀಡಿರುವ ಮುಖ್ಯಮಂತ್ರಿ ಅವರು ಗೋಪಾಲ್ ದಾಸ್ ಅವರ ಶೀಘ್ರ ಚೇತರಿಕೆಗೆ ಅಗತ್ಯವಾದ ಎಲ್ಲ ಸಹಕಾರ ನೀಡುವಂತೆ ತಿಳಿಸಿದ್ದಾರೆ.

ಮೆಡೆಂಟಾ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಟೆಹ್ರಾನ್ ಅವರಿಂದ ಗೋಪಾಲ್ ದಾಸ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದಿರುವ ಯೋಗಿ ಆದಿತ್ಯನಾಥ್, ದಾಸ್ ಅವರ ಶೀಘ್ರ ಗುಣಮುಖಕ್ಕೆ ತ್ವರಿತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.

ಅಯೋಧ್ಯೆಯಲ್ಲಿ ಆ.5ರಂದು ನಡೆದ ರಾಮಮಂದಿರ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವು ಮಹಂತ ನೃತ್ಯಗೋಪಾಲ್‍ದಾಸ್ ಅವರ ಉಸ್ತುವಾರಿಯಲ್ಲಿ ನೆರವೇರಿತ್ತು.

Facebook Comments

Sri Raghav

Admin