ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಚಿಂತಯಿಲ್ಲ : ರಾಮಲಿಂಗಾರೆಡ್ಡಿ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26- ಕೇಂದ್ರ ಸರ್ಕಾರ ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬಂಧಿಸಿರುವುದು ರೈತ ವಿರೋಧಿ ನಡವಳಿಕೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತ ಪಡಿಸಿದ್ಧಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ರೈತರನ್ನು ಬಂಧಿಸುವುದನ್ನು ಬಿಟ್ಟು ಮತ್ತೇನು ಮಾಡಲು ಸಾಧ್ಯ ಎಂದು ಲೇವಡಿ ಮಾಡಿದರು.

ದೇಶದಲ್ಲಿ ನವೆಂಬರ್ ನಿಂದ ರೈತರ ಪ್ರತಿಭಟನೆ ನಡೆಯುತ್ತಿದೆ, ಇಷ್ಟು ದೊಡ್ಡ ಹೋರಾಟ ಹಿಂದೆಂದೂ ನಡೆದಿರಲಿಲ್ಲ. ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಚೆಂತನೆಯಿಲ್ಲ ಎಂದು ಆರೋಪಿಸಿದರು. ರೈತ ವಿರೋಧಿ ಕಾನೂನುಗಳನ್ನ ಜಾರಿಗೆ ತಂದಿದ್ದಾರೆ, ಎಪಿಎಂಸಿಗಳನ್ನು ರೈತರ ಅನುಕೂಲಕ್ಕೆ ಸ್ಥಾಪಿಸಲಾಗಿತ್ತು. ಕಾನೂನು ಜಾರಿಗೆ ತಂದು ಅವುಗಳನ್ನು ವ್ಯಾಪಾರಿಗಳ ಕೈಗೆ ಕೊಟ್ಟಿದ್ದಾರೆ.

ಈ ಹಿಂದೆ ನಮ್ಮ ಸರ್ಕಾರದಲ್ಲಿ ರೈತ ಪರ ಕಾನೂನು ರೂಪಿಸಲಾಗಿತ್ತು. ದೇವರಾಜ ಅರಸ್ಸು ಗೇಣಿದಾರದ ಪರವಾದ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರು. ಬಿಜೆಪಿ ರೈತ ವಿರೋಧಿ ನಿಲುವುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದು ರೈತ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.

Facebook Comments