ಚಿಪ್ಪುಹಂದಿ ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಣೆ

ಈ ಸುದ್ದಿಯನ್ನು ಶೇರ್ ಮಾಡಿ

kanakapurನಂಜನಗೂಡು,ನ.16- ವನ್ಯಜೀವಿ ಚಿಪ್ಪು ಹಂದಿಯನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ ಮೂವರು ಆರೋಪಿಗಳಿಗೆ ಜೆಎಂಎಫ್‍ಸಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ವಿನಾಶದ ಅಂಚಿನಲ್ಲಿರುವ ವನ್ಯಜೀವಿ ಚಿಪ್ಪು ಹಂದಿಯನ್ನು ಹಣದ ಆಸೆಗಾಗಿ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿರುವ ಆರೋಪಿಗಳಿಗೆ ಜಾಮೀನು ನೀಡಿದರೆ ಪುನಃ ಇಂತಹ ಕೃತ್ಯವನ್ನು ಎಸಗಬಹುದೆಂಬ ಉದ್ದೇಶದಿಂದ ಇವರ ಜಾಮೀನನ್ನು ನಿರಾಕರಿಸಲಾಗಿದೆ.
ಘಟನೆ ವಿವರ:
ನ.2ರಂದು ಮಹದೇವನಗರದ ಬಳಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯ ನಿಮಿತ್ತ ಹೋಗುತ್ತಿದ್ದಾಗ ಎಸ್‍ಎಂಪಿ ಬಡಾವಣೆ ಬಳಿ ಎರಡು ಬೈಕ್‍ಗಳಲ್ಲಿ ನಾಲ್ವರು ಅನುಮಾನಾಸ್ಪದವಾಗಿ ಗೋಣಿಚೀಲದಲ್ಲಿ ಯಾವುದೋ ವಸ್ತುವನ್ನು ಇಟ್ಟುಕೊಂಡು ಸಾಗುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಇವರನ್ನು ಹಿಂಬಾಲಿಸಿದಾಗ ಬೈಕ್‍ನಲ್ಲಿದ್ದ ನಾಲ್ವರು ಸ್ವಲ್ಪ ದೂರ ಹೋಗಿ ಬೈಕ್‍ಗಳನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಕೂಡಲೇ ಬೆನ್ನಟಿ ಬಸವರಾಜ, ಯೋಗೇಶ್ ಮತ್ತು ಬಸವರಾಜಿ ಬಿನ್ಲ ಎಂಬಾತನನ್ನು ಹಿಡಿದಿದ್ದು, ಈ ವೇಳೆ ಒಬ್ಬ ಪರಾರಿಯಾಗಿದ್ದಾನೆ. ನಂತರ ಗೋಣಿಚೀಲವನ್ನು ಪರಿಶೀಲಿಸಿದಾಗ ಒಂದು ಜೀವಂತ ಚಿಪ್ಪು ಹೊಂದಿರುವುದು ಕಂಡುಬಂದಿದ್ದು, ಈ ಬಗ್ಗೆ ಆರೋಪಿಗಳನ್ನು ವಿಚಾರಿಸಿದಾಗ ಅರಣ್ಯದಲ್ಲಿ ಇದನ್ನು ಹಿಡಿದು ಮಾರಾಟ ಮಾಡಲು ಒಯ್ಯುತ್ತಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳಿಂದ ಎರಡು ಬೈಕ್ ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಮೂವರು ಆರೋಪಿಗಳು ನ್ಯಾಯಾಲಯದ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದು, ಅಭಿಯೋಗವು ಜಾಮೀನು ಅರ್ಜಿಗೆ ತಕರಾರನ್ನು ಸಲ್ಲಿಸಿ ಜಾಮೀನು ನೀಡದಂತೆ ಕೋರಿತ್ತು. ವಾದವನ್ನು ಆಲಿಸಿದ ಜೆಎಂಎಫ್‍ಸಿ ಒಂದನೇ ಅಧಿಕ ಸಿವಿಲ್ ನ್ಯಾಯಾಧೀಶರಾದ ಶಿವಕುಮಾರ್ ಅವರು ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪುರುಷೋತ್ತಮ್ ಅವರು ವಾದ ಮಂಡಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ