ಕೊನೆಗೂ ಬೋನಿಗೆ ಬಿತ್ತು ರಾಮನಗರದಲ್ಲಿ ಮಗುವನ್ನು ತಿಂದು ತೆಗಿದ್ದ ಚಿರತೆ..!

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಮೇ 13- ಮನೆಗೆ ನುಗ್ಗಿ ಮಗುವನ್ನು ಹೊತ್ತೊಯ್ದು ತಿಂದು ತೇಗಿದ್ದ ಗಂಡು ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದಿದೆ.ಮಾಗಡಿ ತಾಲ್ಲೂಕಿನ ಕದರಯ್ಯನ ಪಾಳ್ಯದ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಇಟ್ಟಿದ್ದ ಬೋನಿಗೆ ನರಭಕ್ಷಕ ಎರಡು ವರ್ಷದ ಗಂಡು ಚಿರತೆ ಇದೀಗ ಸೆರೆಯಾಗಿರುವುದು ಗ್ರಾಮಸ್ಥರಲ್ಲಿ ಕೊಂಚ ನೆಮ್ಮದಿ ತಂದಿದೆ.

ಕಳೆದ ಭಾನುವಾರ ರಾತ್ರಿ ಕದರಯ್ಯನ ಪಾಳ್ಯದಲ್ಲಿ ಜೋರಾಗಿ ಮಳೆ ರುತ್ತಿದ್ದರಿಂದ ಕರೆಂಟ್ ಸ್ಥಗಿತಗೊಂಡಿತ್ತು.ಕದರಯ್ಯನ ಪಾಳ್ಯದ ಮನೆಯೊಂದರಲ್ಲಿ ಸೆಕೆಯೆಂದು ಬಾಗಿಲು ತೆರೆದು ತಮ್ಮ ಮೂರೂವರೆ ವರ್ಷದ ಹೇಮಂತ್ ಮಗುವಿನ ಕುಟುಂಬಸ್ಥರು ಜೊತೆ ಮಲಗಿದ್ದರು.

ತಡರಾತ್ರಿ ಈ ಚಿರತೆ ತೆರೆದಿದ್ದ ಬಾಗಿಲು ಮೂಲಕ ಇವರ ಮನೆಗೆ ನುಗ್ಗಿ ಮಗುವನ್ನು ಹೊತ್ತೊಯ್ದು ಸುಮಾರು ಅರವತ್ತು ಮೀಟರ್ ದೂರದಲ್ಲಿ ಅರೆಬರೆ ತಿಂದು ಪರಾರಿಯಾಗಿತ್ತು. ಮುಂಜಾನೆ ಎಚ್ಚರಗೊಂಡ ಪೋಷಕರು ಮಗುವನ್ನು ತಡಕಾಡಿದಾಗ ಮಗು ನಾಪತ್ತೆಯಾಗಿರುವುದು ಗಮನಿಸಿ ತಕ್ಷಣ ಹೊರಗೆ ಹೋಗಿ ಹುಡುಕಾಡಿದಾಗ ಮನೆಯಿಂದ ಸ್ವಲ್ಪ ದೂರದಲ್ಲಿಯೇ ಮಗುವಿನ ಶವ ಪತ್ತೆಯಾಗಿತ್ತು.

ಈ ಘಟನೆಯಿಂದ ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಾಗಡಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಹಿಡಿಯಲು ಬೋನ್ ಇಟ್ಟಿದ್ದರು. ಈ ಬೋನ್‍ಗೆ ಇದೀಗ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Facebook Comments

Sri Raghav

Admin