ವಿಶ್ವ ದಾಖಲೆ ಸೃಷ್ಟಿಸಿದ ರಾಮಾಯಣ ಧಾರವಾಹಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.2- ಶತಕೋಟಿ ಭಾರತೀಯರ ಜನಮನಗೆದ್ದಿರುವ ರಾಮಾಯಣ ಪೌರಾಣಿಕ ಧಾರವಾಹಿ ಈಗ ವಿಶ್ವ ದಾಖಲೆ ನಿರ್ಮಿಸಿದೆ. ಇಡೀ ಜಗತ್ತಿನಲ್ಲಿ ಅತಿಹೆಚ್ಚು ಮಂದಿ ವೀಕ್ಷಿಸಿದ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ರಾಮಾಯಣ ಪಾತ್ರವಾಗಿದೆ.

ಏ.16ರಂದು ವಿಶ್ವಾದ್ಯಂತ 7.7 ಕೋಟಿಗೂ ಹೆಚ್ಚು ಮಂದಿ ರಾಮಾಯಣ ಧಾರವಾಹಿಯನ್ನು ದೂರದರ್ಶನ ನ್ಯಾಷನಲ್ ವಾಹಿನಿಯಲ್ಲಿ ವೀಕ್ಷಿಸಿದ್ದಾರೆ.
ವಿಶ್ವದ ಬೇರೆ ಯಾವುದೇ ಮನರಂಜನಾ ಕಾರ್ಯಕ್ರಮವನ್ನು ಇಷ್ಟು ಸಂಖ್ಯೆಯಲ್ಲಿ ನೋಡಿರುವುದು ಇದೇ ಮೊದಲು ಎಂದು ಡಿಡಿ ನ್ಯಾಷನಲ್ ಟ್ವಿಟರ್‍ನಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದೆ.

33 ವರ್ಷಗಳ ಬಳಿಕ ಮತ್ತೆ ಪ್ರಸಾರವಾದ ರಾಮಯಣ ಧಾರವಾಹಿ ಜನಮನದಲ್ಲಿ ಹಚ್ಚಹಸಿರಾಗಿರುವುದಕ್ಕೆ 7.7 ಕೋಟಿಗೂ ಹೆಚ್ಚು ಮಂದಿ ಈ ಪೌರಾಣಿಕ ಕಾರ್ಯಕ್ರಮವನ್ನು ನೋಡಿರುವುದು ಸಾಕ್ಷಿಯಾಗಿದೆ ಎಂದು ಡಿಡಿ ನ್ಯಾಷನಲ್ ಬಣ್ಣಿಸಿದೆ.

1987ರಲ್ಲಿ ಪ್ರಸಾರವಾದ ರಾಮಾಯಣ ಸುದೀರ್ಘ ಕಾಲ ದೂರದರ್ಶನದಲ್ಲಿ ಪ್ರಸಾರವಾಗಿ ಭಾರತೀಯರ ಅಪಾರ ಮೆಚ್ಚುಗೆ ಗಳಿಸಿತ್ತು. ರಮಾನಂದ ಸಾಗರ್ ನಿರ್ದೇಶಿಸಿ ನಿರ್ಮಿಸಿದ್ದ ಈ ಧಾರವಾಹಿ ಜಗದ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ ಕೊರೊನಾ ದಾಳಿ ಹೆಚ್ಚಾದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾ. 24ರಂದು ದೇಶವ್ಯಾಪಿ ಮೊದಲ ಬಾರಿಗೆ ಲಾಕ್‍ಡೌನ್ ಘೋಷಿಸಿದ ನಂತರ ಡಿಡಿ ನ್ಯಾಷನಲ್‍ನಲ್ಲಿ ರಾಮಾಯಣ ಪೌರಾಣಿಕ ಧಾರವಾಹಿ ಪ್ರಸಾರ ಮಾಡಲಾಗುತ್ತಿದೆ.

Facebook Comments

Sri Raghav

Admin