“ಸೊಸೆಯಾಗಿ ಬಂದವರು ನಮ್ಮ ಮನೆಯ ಮಗಳಾಗಿ ಉಳಿದಿದ್ದಾರೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.28-ನಮ್ಮ ಮನೆಗೆ ಸೊಸೆಯಾಗಿ ಬಂದವರು ನಮ್ಮ ಮನೆಯ ಮಗಳಾಗಿ ಉಳಿದಿದ್ದಾರೆ ಎಂದು ಶಾಸಕ ರಾಮದಾಸ್, ಕೆಲ ಸಚಿವರು ಕಾಂಗ್ರೆಸ್‍ಗೆ ಹೋಗಬಹುದು ಎಂಬ ಹೇಳಿಕೆಗೆ, ಅವರದೇ ಆದ ರೀತಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಚಿವರು ಕಾಂಗ್ರೆಸ್‍ಗೆ ಹೋಗಬಹುದು ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ನಮ್ಮ ಮನೆಗೆ ಸೊಸೆಯಾಗಿ ಬಂದವರು ಈಗ ಸೊಸೆಯಾಗಿಲ್ಲ. ಮಗಳೇ ಆಗಿದ್ದಾರೆ. ಅವರು ನಮ್ಮಲ್ಲಿಗೆ ಬಂದಿದ್ದಾರೆ ಎಂದರೆ ನಮ್ಮ ಅಣ್ಣತಮ್ಮಂದಿರಿದ್ದಂತೆ. ನಾವೆಲ್ಲ ಒಟ್ಟಾಗಿ ಸೇರಿ ಚುನಾವಣೆ ಎದುರಿಸುತ್ತೇವೆ. ಮತ್ತೆ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ತರುತ್ತೇವೆ ಎಂದರು.

ನಾವೆಲ್ಲ ಹಿರಿಯ ಶಾಸಕರ ಸಂದರ್ಭಗಳಿಗೆ ತಕ್ಕಂತೆ ಅನುಸರಿಸಿಕೊಂಡು ಹೋಗಬೇಕು. ಅದು ನಮ್ಮ ಜವಾಬ್ದಾರಿಯೂ ಕೂಡ ಎಂದು ಹೇಳಿದರು.  ಮಂತ್ರಿ ಸ್ಥಾನ ಸಿಕ್ಕಿಲ್ಲ. ಸಿಕ್ಕಿದೆ ಎಂದು ಹೇಳಿಕೊಳ್ಳುವುದಲ್ಲ. ನಾನು 25 ವರ್ಷಗಳಿಂದ ಶಾಸಕನಾಗಿದ್ದೇನೆ. ನಮ್ಮ ಅನುಭವವನ್ನು ಜನರಿಗೆ ತಿಳಿಸುವುದರಲ್ಲಿ ನನಗೆ ಸಂತೋಷ ಎಂದರು.

Facebook Comments