ರಂಗು ರಂಗಿನ ಸಾಂಗ್ ಜೊತೆ ನಟ ರಮೇಶ್ ಬರ್ತ್‍ಡೇ ಸೆಲೆಬ್ರೆಷನ್

ಈ ಸುದ್ದಿಯನ್ನು ಶೇರ್ ಮಾಡಿ

ಚಂದನವನದ ಸಹಜ ಅಭಿನಯದ ನಟ ರಮೇಶ್ ಅರವಿಂದ್ ಬರ್ತ್ ಡೇಗೆ ಸೂರಜ್ ಪ್ರೊಡಕ್ಷನ್ಸ್ ವತಿಯಿಂದ ನಿರ್ಮಾಪಕ ಎಂ.ರಮೇಶ್ ರೆಡ್ಡಿರವರು ಗಿಫ್ಟ್ ವೊಂದನ್ನು ನೀಡಿದ್ದಾರೆ. ಹೌದು. ಅವರ ಬರ್ತ್‍ಡೇ ಸಂಭ್ರಮಕ್ಕಾಗಿ 100 ಚಿತ್ರದ ವೀಡಿಯೋ ಲಿರಿಕಲ್ ಸಾಂಗ್ ಅನ್ನು ಬಿಡುಗಡೆ ಮಾಡಿಸಿದ್ದಾರೆ. ಇತ್ತೀಚೆಗೆ ಬಟರ್‍ಫ್ಲೈ ಮುಗಿಸಿದ್ದ ರಮೇಶ್ ಅರವಿಂದ್, ತಾವೇ ನಾಯಕನಾಗಿ ಅಭಿನಯಿಸಿದ ಕುತೂಹಲಕಾರಿ ಚಲನಚಿತ್ರ 100ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಎಂ. ರಮೇಶ್ ರೆಡ್ಡಿ(ನಂಗ್ಲಿ) ಅವರು ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ.  ಇಂದು ನಟ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬ, ಹಾಗಾಗಿ 100 ಚಿತ್ರ ತಂಡ ಅವರ ಜನ್ಮ ದಿನದ ವಿಶೇಷವಾಗಿ ಬೆಳಿಗ್ಗೆ 10ಕ್ಕೆ ರವಿ ಬಸ್ರೂರ್ ಮ್ಯೂಸಿಕ್ ಕಂಪೋಜ್ ಮಾಡಿರುವ ರಂಗು ರಂಗು ಪಾರ್ಟಿಗೆ ಚಂದದಂಥ ಮೂತಿಗೆ ಎನ್ನುವ ಬರ್ತ್‍ಡೇ ಪಾರ್ಟಿ ಹಾಡನ್ನು ಡಿ ಬೀಟ್ಸ್ ಯೂ ಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆ ಮಾಡ ಲಾಗಿದೆ.

ರಮೇಶ್ ಅರವಿಂದ್ ಅವರು 100 ಚಿತ್ರದ ನಿರ್ದೇಶನ ಮಾಡುವ ಹೊಣೆಯ ಜೊತೆಗೆ ಚಿತ್ರದಲ್ಲಿ ನಾಯಕನಾಗಿಯೂ ಕೂಡ ನಟಿಸುತ್ತಿದ್ದಾರೆ.  ಬರುವ ನವೆಂಬರ್‍ನಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಪ್ಲಾನ್ ಚಿತ್ರ ತಂಡಕ್ಕೆ ಇದೆ. ಈ ವರ್ಷದ ಕೊನೆಯಲ್ಲಿ ಚಿತ್ರ ರಿಲೀಸ್ ಮಾಡುವ ಸಾಧ್ಯತೆ ಇದೆ.

ಈ ಸಿನಿಮಾದಲ್ಲಿ ರಮೇಶ್ ಅವರು ಒಬ್ಬ ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿ ಕೊಂಡಿದ್ದು, ವೆಂಕಟ ಇನ್ ಸಂಕಟ ಹಾಗೂ ಇನ್ನೂ ಬಿಡುಗಡೆಯಾಗದ ಭೈರಾದೇವಿ ಚಿತ್ರಗಳ ನಂತರ ಖಡಕ್ ಪೊಲೀಸ್ ಅಧಿಕಾರಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಇವರ ಪಾತ್ರದ ಹೆಸರು ವಿಷ್ಣು, ಸೃಷ್ಟಿಕರ್ತ, ದುಷ್ಟರ ವಿನಾಶಕ ವಿಷ್ಣು. ಹೀಗಾಗಿ ಅವರು ತೆರೆಯ ಮೇಲೆ ದೃಷ್ಟರನ್ನು ನಾಶ ಮಾಡುವುದರಿಂದ ವಿಷ್ಣು ಎನ್ನುವ ಹೆಸರನ್ನ ಈ ಪಾತ್ರಕ್ಕೆ ಇಡಲಾಗಿದೆ. ಅಂದ ಹಾಗೆ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆಯಲ್ಲಿ ಪೂರ್ಣ, ರಚಿತಾ ರಾಮ್, ವಿಶ್ವ , ಪೂಜಾ, ಅಮಿತ್ ರಂಗನಾಥ್, ಬೇಬಿ ಸ್ಮಯ , ಡಿ.ಪಿ.ಸತೀಶ್, ರಾಜೇಶ್‍ರಾವ್ ಹಾಗೂ ಮುಂತಾದವರ ಅಭಿನಯವಿದೆ.

ಈ ಒಂದು ಚಿತ್ರ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿದ್ದು , ಸದ್ಯ ಕನ್ನಡದಲ್ಲಿ ಸೆನ್ಸಾರ್ ಆಗಿದ್ದು , ಬಿಡುಗಡೆಗೆ ಮುಕ್ತವಾಗಿದೆ. ಸಿನಿ ಪ್ರಿಯರಿಗಾಗಿ ಒಂದು ವಿಶೇಷವಾದ ಚಿತ್ರವನ್ನು ನೀಡುವ ನಿಟ್ಟಿನಲ್ಲಿ ನಿರ್ಮಾಪಕರು ಬಹಳ ಅದ್ಧೂರಿಯಾಗಿ ಚಿತ್ರವನ್ನು ಸಿದ್ಧಪಡಿಸಿದ್ದಾರೆ.

ಈ ಚಿತ್ರಕ್ಕೆ ಆಕಾಶ್ ಶ್ರೀ ವತ್ಸ ಸಂಕಲನ ಮಾಡಿದ್ದು , ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ.  ಸದ್ಯ ಬಿಡುಗಡೆಯಾಗಿರುವ ಈ ಲಿರಿಕಲ್ ಸಾಂಗ್ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಅತಿ ಶೀಘ್ರದಲ್ಲಿ 100 ಬೆಳ್ಳಿ ಪರದೆಯ ಮೇಲೆ ರಾರಾಜಿಸಲು ಸನ್ನದ್ಧವಾಗಿದೆ.

Facebook Comments