ಅಡ್ಡ ಗೋಡೆ ಮೇಲೆ ದೀಪ ಇಟ್ಟ ಸಚಿವ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಮೇ.29- ರಾಜ್ಯಸಭೆ, ವಿಧಾನ ಪರಿಷತ್ತು ಸದಸ್ಯತ್ವ ವಿಚಾರದಲ್ಲಿ ಗುಟ್ಟು ಬಿಟ್ಟುಕೊಡದೆ ಸಚಿವ ರಮೇಶ ಜಾರಕಿಹೊಳಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ.  ನಮ್ಮ ಪಕ್ಷದ ಹೈಕಮಾಂಡ ಇದೆ ಅವರೇ ಈ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ. ವಿಶ್ವನಾಥ್ ಆಯ್ಕೆ ವಿಚಾರವನ್ನೂ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು, ವಿಶ್ವನಾಥï ನಿನ್ನೆ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿದ್ದೆವು. ಪ್ರಸಾದï ಹಿರಿಯರು. ನನಗೆ ಯೂತ್ ಕಾಂಗ್ರೆಸ್ ಕೋಟಾದಡಿ ಮೊದಲು ಟಿಕೆಟï ಕೊಟ್ಟಿದ್ದೇ ಪ್ರಸಾದ ಎಂದು ಸ್ಮರಿಸಿದರು.. ನನ್ನ ರಾಜಕೀಯ ಪ್ರವೇಶಕ್ಕೆ ಅವರು ಕಾರಣಕರ್ತರು. ಆದ್ದರಿಂದ ಭೇಟಿ ಮಾಡಿ ಮಾತನಾಡಿದ್ದೇನೆ. ಅದರ ಹೊರತು ಬೇರೇನೂ ಇಲ್ಲ ಎಂದು ತಿಳಿಸಿದರು.

Facebook Comments