ಸಿದ್ದು ಬುಲಾವ್, ದಿಢೀರ್ ಬೆಂಗಳೂರಿನತ್ತ ರೆಬಲ್ ರಮೇಶ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ. ಮೇ.13 : ಬೆಳಗಾವಿ ರಾಜಕೀಯದಲ್ಲಿ ದಿನಕ್ಕೊಂದು ಹೊಸ ತಿರುವು‌ ಪಡೆದುಕೊಳ್ಳುತ್ತದೆ‌. ರಮೇಶ ಜಾರಕಿಹೊಳಿ  ಅಸಮಾಧಾನ ಇರುವುದರಿಂದ  ಅತೃಪ್ತರ ಶಾಸಕರ ಇದ್ದಾರೆ ಎಂಬ  ಮಾತು ಕಳೆದ ಎರಡು ದಿನಗಳಿಂದ ತಿಳಿದು ಬಂದಿತ್ತು.

ರಮೇಶ ಜಾರಕಿಹೊಳಿ ಬೆಂಗಳೂರಿನಿಂದ ಬಂದು ಸತೀಶ ಜಾರಕಿಹೊಳಿ  ಆಪ್ತರು ಹಾಗೂ ಮಾಜಿ ಸಚಿವ ಲಕ್ಷ್ಮಣ ಸವದಿ ಜತೆ ಸಭೆ ನಡೆಸಿದ್ದ  ವಿಚಾರ  ಜಿಲ್ಲೆಯ ರಾಜಕಾರಣದಲ್ಲಿ  ತ್ರೀವ ಕುತೂಹಲ ಎಡೆ ಮಾಡಿಕೊಟ್ಟಿತು.

ಇದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ವಿರುದ್ಧ ಸಿಡಿದೆದ್ದಾರೆ. ಇನ್ನು ಇತ್ತ ಶಾಸಕ ರಮೇಶ್ ಜಾರಕಿಹೊಳಿ ಅವರು ದಿಢೀರ್ ಆಗಿ ಬೆಂಗಳೂರಿಗೆ ಹೊರಟಿದ್ದು, ಇದೀಗ ತೀವ್ರ ಕುತೂಹಲ ಮೂಡಿಸಿದೆ.

ತುರ್ತಾಗಿ ರಮೇಶ ಜಾರಕಿಹೊಳಿ ‌ಬೆಂಗಳೂರಿಗೆ ಬರುವಂತೆ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಕರೆ‌ಮಾಡಿ ಹೇಳಿದ್ದಾರೆ.   ಈಗಿನಿಂದಲೇ ಬೆಂಗಳೂರಿಗೆ  ರಮೇಶ ಜತೆ ಮಗ ಅಮರ ಸಹ ಟಿಕೆಟ್ ಬುಕ್ ಮಾಡಿಸಿ  ಪ್ರಯಾಣ ಬೆಳಿಸಿದ್ದಾರೆ.‌

ಜತೆಗೆ  ಕೈ ಮತ್ತು ದಳ ನಾಯಕರ ಪರಸ್ಪರ ಮಾತಿನ ವಿವಾದ ಹಿನ್ನೆಲೆಯಲ್ಲಿ ಇದನ್ನೇ ಲಾಭವಾಗಿ ಬಳಸಿಕೊಳ್ಳಲು ರಮೇಶ್ ಮುಂದಾಗಿದ್ದು, ರೆಬೆಲ್ ಶಾಸಕರನ್ನು ಒಟ್ಟುಗೂಡಿಸುವ ಕೆಲಸ ಮಾಡಲಿದ್ದಾರೆ.

ಅಲ್ಲದೆ ಬೆಂಬಲಿಗರಿಗೆ ಹೊಸ ಸಂದೇಶ ತರುವುದಾಗಿ ಹೇಳಿ ಜಾರಕಿಹೊಳಿ ಹೊರಟಿದ್ದಾರೆ ಎಂಬುದಾಗಿ ಅವರ ಆಪ್ತರಿಂದ ತಿಳಿದುಬಂದಿದ್ದೆ.ಈ ಮೂಲಕ ಆಪರೇಷನ್ ಕಮಲಕ್ಕಾಗಿ ಅತೃಪ್ತ ಶಾಸಕರು ಮತ್ತೆ ಒಂದಾಗ್ತಾರಾ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಮೂಡಿದರಿಂದ ಕುಂದಾನಗರಿಯ ರಾಜಕಾರಣದಲ್ಲಿ ಮತ್ತಷ್ಟು ಚರ್ಚೆಗೆ  ಬೆಳಗಾವಿ ರಾಜಕೀಯ ಗ್ರಾಸವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin