ಸಾಲದ ಸುಳಿಯಲ್ಲಿ ಸಾಹುಕಾರ‌, ಸಕ್ಕರೆ ಕಾರ್ಖಾನೆ‌ ಮುಟ್ಟುಗೋಲಿಗೆ ಚಿಂತನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ‌ ಬಂಡಾಯದ ನೇತೃತ್ವ ವಹಿಸಿಕೊಂಡು ಬಿಜೆಪಿಯತ್ತ ಮುಖ ಮಾಡಿದ ಮಾಜಿ‌ ಸಚಿವ ರಮೇಶ್ ಜಾರಕಿಹೊಳಿ ಸೈಲೆಂಟ್ ಆಗಿಬಿಟಿದ್ದು ರಾಜಕೀಯ ವಲಯದಲ್ಲಿ‌ ತೀವ್ರ ಚರ್ಚೆಗೆ ಕಾರಣವಾಗಿದೆ.

ಕಳೆದ ಕೆಲವು ತಿಂಗಳನಿಂದ ರಾಜೀನಾಮೆ ಬಾಂಬ್ ಸಿಡಿಸಿ ದೊಸ್ತಿ‌ ಸರಕಾರದ ಮೇಲೆ‌ ಬಂಡಾಯದ ತೂಗುಕತ್ತಿ ಇಟ್ಟು ದೊಸ್ತಿ ಸರಕಾರಕ್ಕೆ ಆತಂಕ ಉಂಟು ಮಾಡಿದ ಮಾಜಿ‌ ಸಚಿವ ರಮೇಶ‌ ಜಾರಕಿಹೊಳಿ ಇದೀಗ‌ ಒಂದು ತಿಂಗಳಿನಿಂದ ಕಾಣಿಸುತ್ತಿಲ್ಲಾ.

ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಸಕ್ಕರೆ ಕಾರ್ಖಾನೆಯ 253 ಕೋಟಿ ಸಾಲ ಬಾಕಿ ಇದೆ ಕಳೆದ ಆರು ತಿಂಗಳ‌‌ ಹಿಂದೇಯೆ ಅಪೆಕ್ಸ ಬ್ಯಾಂಕನಿಂದ ನೋಟಿಸ್ ಕಳುಹಿಸಲಾಗಿತ್ತು. ಇದೇ ಕಾರಣಕ್ಕೆ ಇದೀಗ ಸಮೀಶ್ರ ಸೇಫ್ ಆಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

‌ಬರೀ‌ ಅಪೆಕ್ಸ ಬ್ಯಾಂಕನಲ್ಲಿ ಅಷ್ಟೆ ಅಲ್ಲದೇ ಬೆಂಗಳೂರಿನ ಅಪೆಕ್ಸ ಬ್ಯಾಂಕನಲ್ಲಿ 119 ಕೋಟಿ, ವಿಜಯಪುರ ಡಿಸಿಸಿ ಬ್ಯಾಂಕ 40 ಕೋಟಿ, ತುಮಕೂರು ಡಿಸಿಸಿ‌‌ ಬ್ಯಾಂಕ 31 ಕೋಟಿ,ಮಂಗಳೂರಿನ ಸ್ಥ ಕೆನರಾ ಡಿಸಿಸಿ ಬ್ಯಾಂಕ 31 ಕೋಟಿ,ಶಿರಸಿ‌ ಡಿಸಿಸಿ ಬ್ಯಾಂಕ 31 ಕೋಟಿ ಸಾಲವಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ‌ ತಿಳಿದು ಬಂದಿದೆ.

ಸೌಭಾಗ್ಯ ಲಕ್ಷ್ಮೀ‌ ಕಾರ್ಖಾನೆಗೋಸ್ಕರ ಅಪೆಕ್ಸ ಬ್ಯಾಂಕನಲ್ಲಿ‌ ಪಡೆದ‌ ಸಾಲ ಮರುಪಾವತಿ‌ಮಾಎದ ಹಿನ್ನೆಲೆಯಲ್ಲಿ‌ ಮುಟ್ಟುಗೋಲಿಗೆ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಸಕ್ಕರೆ ಕಾರ್ಖಾನೆ ಉಳಿಸಿಕೊಳ್ಳಲು ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸದ್ಯ ಬಂಡಾಯದ ದೂರ ಉಳಿದರಾ ಅನ್ನೋ ಅನುಮಾನವೂ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ರೈತರಿಗೆ ಕೊಡಬೇಕಾದ ಬಾಕಿ ಹಣ ಕೊಡಿಲಿಲ್ಲಾ ಅಂದರೆ ರೈತರು ಉಗ್ರ ಹೊರಾಟದ ಎಚ್ಚರಿಕೆ ನೀಡಿದ್ದಾರೆ.

Facebook Comments

Sri Raghav

Admin