ಯಾವ ಕೇಸ್ ಬೇಕಾದರೂ ಹಾಕಲಿ, ಎದುರಿಸಲು ನಾನು ಸಿದ್ದ : ರಮೇಶ್ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.26- ಆಕೆ ನಿಜವಾದ ಸಂತ್ರಸ್ತೆಯಾಗಿದ್ದರೆ ಮೊದಲೇ ದೂರು ಕೊಡಬೇಕಿತ್ತು. ಈಗ ಎಲ್ಲೋ ಕುಳಿತು ದೂರು ಕೊಡುತ್ತಿದ್ದಾಳೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಮಹಾ ಷಡ್ಯಂತ್ರ ಎಂದು ಮೊದಲಿಂದಲೂ ಹೇಳುತ್ತಿದ್ದೇನೆ. ಇಂತಹ 10 ಸಿಡಿ ಬಿಡಲಿ. ಯಾವ ಕೇಸ್ ಬೇಕಾದರೂ ಹಾಕಲಿ. ಎಲ್ಲದಕ್ಕೂ ನಾನು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ನಾನು ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವುದಿಲ್ಲ. ನಾನೇನು ತಪ್ಪು ಮಾಡಿಲ್ಲ. ಹಾಗಿದ್ದ ಮೇಲೆ ನಾನೇಕೆ ಜಾಮೀನು ತೆಗೆದುಕೊಳ್ಳಬೇಕೆಂದು ಮರುಪ್ರಶ್ನಿಸಿದ್ದಾರೆ.

ನಾನು ವಕೀಲರ ಜತೆ ಮಾತನಾಡುತ್ತೇನೆ. ಆ ಬಳಿಕ ಹೆಚ್ಚಿನ ವಿವರ ನೀಡುತ್ತೇನೆ. ಆಕೆ ನಿಜವಾದ ಸಂತ್ರಸ್ತೆಯಾಗಿದ್ದರೆ ಮೊದಲೇ ಏಕೆ ದೂರು ಕೊಡಲಿಲ್ಲ ? ಈಗ ಎಲ್ಲೊ ಕುಳಿತು ಏಕೆ ದೂರು ಕೊಡುತ್ತಿದ್ದಾಳೆ ? ಸಿಡಿ ಸೇರಿದಂತೆ ಇನ್ನೂ ಏನೇನು ಬಿಡುತ್ತಾರೋ ಬಿಡಲಿ. ನಾನು ರೆಡಿ ಇದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

Facebook Comments