ರಂಗೇರಿದ ಗೋಕಾಕ್ ಉಪಚುನಾವಣಾ ಕಣ, ಸಾವುಕಾರ್ ರಮೇಶ್ ಶಕ್ತಿ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ನ.15- ಗೋಕಾಕ್ ಉಪಚುನಾವಣಾ ಕಣ ರಂಗೇರಿದೆ. ಬಿಜೆಪಿ ಸೇರಿರುವ ಅನರ್ಹ ಶಾಸಕರ ರಮೇಶ್ ಜಾರಕಿಹೊಳಿ ಕ್ಷೇತ್ರಕ್ಕೆ ಮರಳಿದ್ದು, ಶಕ್ತಿ ಪ್ರದರ್ಶನದ ಮೂಲಕ ಚುನಾವಣ ರಣ ಕಹಳೆ ಮೊಳಗಿಸಿದ್ದಾರೆ. ಇತ್ತ ಕಾಂಗ್ರೆಸ್‍ನಲ್ಲಿ ಇನ್ನೂ ಟಿಕೆಟ್ ಗೊಂದಲ ಮುಂದುವರೆದಿದೆ.

ರಮೇಶ್ ವಿರುದ್ಧ ಲಖನ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆದಿದ್ದರೂ ಬಿಜೆಪಿಯ ಅಶೋಕ್ ಪೂಜಾರಿ ಅವರನ್ನು ಕರೆ ತರುವ ಯತ್ನ ಕೂಡ ನಡೆಯುತ್ತಿದೆ. ರಮೇಶ್ ಬೆಂಬಲಿಗರು ನೂರಾರು ಬೈಕ್‍ಗಳ ಮೂಲಕ ರ್ಯಾಲಿ ನಡೆಸಿ ರಮೇಶ್ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.

ಗೋಕಾಕ್‍ನ ಅವರ ನಿವಾಸದ ಬಳಿ ಏರ್ಪಡಿಸಿದ್ದ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡ ಅವರು, ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಬೆಂಗಳೂರಿನಿಂದ ಬೆಳಗ್ಗೆ 11 ಗಂಟೆಗೆ ವಿಮಾನದಲ್ಲಿ ಬೆಳಗಾವಿಗೆ ಹೊರಟ ಅವರು, ಮಧ್ಯಾಹ್ನ ಸುಮಾರು 1 ಗಂಟೆಗೆ ಸಮಾವೇಶದ ಸ್ಥಳ ತಲುಪಿದರು. ರಮೇಶ್ ಅವರ ಸ್ವಾಗತಕ್ಕೆ ಬೆಂಬಲಿಗರು ಭಾರೀ ಕಟೌಟ್, ಬ್ಯಾನರ್‍ಗಳನ್ನು ಅಳವಡಿಸಿದ್ದರು. ಸಾವಿರಾರು ಇಂದಿನ ಸಭೆಯಲ್ಲ ಪಾಲ್ಗೊಂಡು ರಮೇಶ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು.

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಬೆಂಬಲಿತ ಹಲವಾರು ತಾಲೂಕು ಪಂಚಾಯತಿ, ನಗರಸಭೆ, ಪಟ್ಟಣ ಪಂಚಾಯತಿ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಬೆಂಬಲಿಸಿದ್ದಾರೆ.

Facebook Comments