ಬಿಗ್ ಬ್ರೇಕಿಂಗ್ : ಬಿಜೆಪಿಯತ್ತ ಸಿದ್ದರಾಮಯ್ಯ..! ರಮೇಶ್ ಜಾರಕಿಹೊಳಿ ಭಯಂಕರ ಭವಿಷ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಡಿ.5- ಸಿದ್ದರಾಮಯ್ಯನವರನ್ನು ಬಿಜೆಪಿಗೆ ಕರೆತರುವೆ. ಸದ್ಯದಲ್ಲೇ ಅವರು ಬಿಜೆಪಿಗೆ ಬರಲಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸೇರಿದಂತೆ ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಅವರ ಮೇಲೆ ಅಪಾರ ಗೌರವವಿದೆ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ತುಳಿದಷ್ಟು ನಾನು ಬೆಳೆದಿದ್ದೇನೆ. ಈ ಬಾರಿಯ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಅಥವಾ ಜೆಡಿಎಸ್ ಒಂದು ಸ್ಥಾನದಲ್ಲಿ ಗೆಲ್ಲುವುದೂ ಸಹ ಕಷ್ಟ ಎಂದರು.

ಹರಾಮಿ ದುಡ್ಡನ್ನು ಖಾಲಿ ಮಾಡುವ ಸಲುವಾಗಿ ಲಖನ್ ಜಾರಕಿಹೊಳಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾನೆ. ಸಹೋದರರ ನಡುವೆ ಈತ ಜಗಳ ಹಚ್ಚುತ್ತಾನೆ ಎಂಬುದು ನನಗೆ ಗೊತ್ತಿರಲಿಲ್ಲ. ಅವನ ನೆರಳು ಸಹ ನನ್ನ ಜೊತೆಗೆ ಬೇಡ ಎಂದು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಪ್ರಶ್ನೆಗೆ ಖಾರವಾಗಿ ಉತ್ತರಿಸಿರುವ ರಮೇಶ್ ಜಾರಕಿಹೊಳಿ, ಬಸ್‍ಸ್ಟ್ಯಾಂಡ್ ಹೂ, ಎಸ್‍ಟಿಡಿ ಬೂತ್ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ನಾನು ಮಾತನಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ರಾಜಕಾರಣದ ಉಸಾಬರಿ ಬಿಟ್ಟರೆ ಅವರು ನನ್ನ ಒಳ್ಳೆಯ ಸ್ನೇಹಿತ. ಯಾವುದೇ ಕ್ಷೇತ್ರದಿಂದ ನನ್ನ ಅಳಿಯನನ್ನು ನಿಲ್ಲಿಸಿ ಗೆಲ್ಲಿಸುವೆ ಎಂದು ಹೇಳಿದರು.

Facebook Comments