‘ಮಿಡತೆ ದಾಳಿ ತಡೆಗೆ ಕೃಷಿ-ಜಲಸಂಪನ್ಮೂಲ ಇಲಾಖೆ ತಯಾರಿ’

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ 28- ರಾಜ್ಯದಲ್ಲಿ ಮಿಡತೆಗಳ ಭೀತಿ ಹಿನ್ನೆಲೆಯಲ್ಲಿ ಕೃಷಿ ಹಾಗೂ ಜಲಸಂಪನ್ಮೂಲ ಇಲಾಖೆ ಅದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ನಗರದ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿಡತೆಗಳ ಬಗ್ಗೆ ಮಾಹಿತಿ ಇದೆ. ಹೀಗಾಗಿ ಇದರ ನಿಯಂತ್ರಣಕ್ಕೆ ಕೃಷಿ-ಜಲಸಂಪನ್ಮೂಲ ಇಲಾಖೆಯೊಂದಿಗೆ ಕಾರ್ಯತಂತ್ರ ರೂಪಿಸಲಾಗುವುದು ಎಂದರು.

ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ನೆರವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಣ ಇನ್ನೂ ಇಲಾಖಾವಾರು ಹಂಚಿಕೆಯಾಗಿಲ್ಲ. ಕೇಂದ್ರ ಸಂಕಷ್ಟದ ಸಮಯದಲ್ಲಿ ಉತ್ತಮ ಪರಿಹಾರ ಘೋಷಿಸಿದೆ. ಜಲ ಸಂಪನ್ಮೂಲ ಇಲಾಖೆಗೆ ಎಷ್ಟು ಹಣ ಸಿಗಲಿದೆ ಎಂಬುದು ತಿಳಿದಿಲ್ಲ.

ಕೃಷಿ ನೀರು ಹರಿಸುವ ಬಗ್ಗೆ ಅಂತಾರಾಜ್ಯ ಮಟ್ಟದಲ್ಲಿ ಸಭೆ ನಡೆದಿದ್ದು, ಶೀಘ್ರದಲ್ಲೇ ನೀರು ಬಿಡುಗಡೆಯಾಗಲಿದೆ. ಕಾವೇರಿ-ಕಬಿನಿ ಡ್ಯಾಮ್ ಸಹ ಅಂತಾರಾಜ್ಯ ವಿವಾದ ಹೊಂದಿದೆ. ಹಾಗಾಗಿ ಈ ಡ್ಯಾಮ್‍ಗಳಿಂದ ನೀರು ಹರಿಸುವ ಅಧಿಕಾರ ಇಲ್ಲ. ಅಧಿಕಾರಿಗಳ ಸಭೆ ನಡೆದಿದೆ. ಅದರಂತೆ ಜಲಾಶಯ ಸ್ಥಿತಿಗತಿ ನೋಡಿ ನೀರು ಬಿಡುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Facebook Comments