ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.29- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಎಸ್‍ಐಟಿ ಪೊಲೀಸರ ಎದುರು ವಿಚಾರಣೆಗೆ ಹಾಜರಾದರು. ಮಡಿವಾಳದ ಟೆಕ್ನಿಕಲ್ ಸೆಂಟರ್‍ಗೆ ಆಗಮಿಸಿದ ಜಾರಕಿಹೊಳಿ ಅವರು ವಿಚಾರಣೆಗೊಳಗಾಗಿ ಪೊಲೀಸರು ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಕೇಳಿ ಬಂದ ನಂತರ ಅವರು ಮೂರನೆ ಬಾರಿಗೆ ಎಸ್‍ಐಟಿ ಪೊಲೀಸರ ವಿಚಾರಣೆಗೆ ಹಾಜರಾಗುತ್ತಿದ್ದಾರೆ.

ಸಿಡಿ ಬಹಿರಂಗಗೊಂಡ ನಂತರ ಸದಾಶಿವನಗರ ಪೊಲೀಸ್ ಠಾಣೆಗೆ ರಮೇಶ್ ಜಾರಕಿಹೊಳಿ ಅವರು ದೂರು ನೀಡಿದರು. ನಂತರ ಅವರನ್ನು ಎರಡು ಬಾರಿ ವಿಚಾರಣೆಗೊಳಪಡಿಸಲಾಗಿತ್ತು.ಸಂತ್ರಸ್ತ ಯುವತಿ ತಮ್ಮ ವಕೀಲರ ಮೂಲಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ದಾಖಲಿಸಿದ ನಂತರ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

ಎಫ್‍ಐಆರ್ ದಾಖಲಾದ ನಂತರ ಎಸ್‍ಐಟಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟೀಸ್ ನೀಡಿದ್ದರು.ಪೊಲೀಸರು ನೋಟೀಸ್ ನೀಡಿದ ಹಿನ್ನೆಲೆಯಲ್ಲಿ ಇಂದು ಮಡಿವಾಳದಲ್ಲಿರುವ ಟೆಕ್ನಿಕಲ್ ಸೆಂಟರ್‍ನಲ್ಲಿ ಮತ್ತೊಮ್ಮೆ ರಮೇಶ್ ಜಾರಕಿಹೊಳಿ ಎಸ್‍ಐಟಿ ಪೊಲೀಸರ ವಿಚಾರಣೆ ಎದುರಿಸಿದರು.

ಸಂತ್ರಸ್ತ ಯುವತಿ ನೀಡಿರುವ ದೂರಿನಲ್ಲಿದ್ದ ಕೆಲ ಅಂಶಗಳ ಬಗ್ಗೆ ಎಸ್‍ಐಟಿ ಪೆÇಲೀಸರು ರಮೇಶ್ ಜಾರಕಿಹೊಳಿ ಅವರಿಂದ ಕೆಲ ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ. ಯುವತಿ ಹಾಗೂ ಜಾರಕಿಹೊಳಿ ನಡುವಿನ ಪರಿಚಯ ಹಾಗೂ ಆಕೆ ಮಾಡಿರುವ ಕೆಲ ಆರೋಪಗಳ ಬಗ್ಗೆಯೂ ಎಸ್‍ಐಟಿ ಪೊಲೀಸರು ರಮೇಶ್ ಜಾರಕಿಹೊಳಿ ಅವರಿಂದ ವಿಷಯಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin