ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಬಳಸಿದ ಶಬ್ದಕ್ಕೆ ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23- ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಬಳಸಿದ ಶಬ್ದವನ್ನು ವಿಧಾನಸಭೆಯಲ್ಲಿ ಕಡತದಿಂದ ತೆಗೆಯಲಾಯಿತು. ನಿಯಮ 69ರಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರರು ಮಾಡಿದ ಪ್ರಸ್ತಾಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಉತ್ತರ ನೀಡುತ್ತಾ, ವೈದ್ಯಕೀಯ ಸಾಮಾಗ್ರಿಗಳ ಖರೀದಿ ಬಗ್ಗೆ ಪ್ರಸ್ತಾಪ ಮಾಡುತ್ತಾ, ಖರೀದಿಗಾಗಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಆ ವೇಳೆ ಕೋಪಗೊಂಡ ರಮೇಶ್‍ಕುಮಾರ್, ಶಬ್ದವೊಂದನ್ನು ಬಳಸಿದರು. ಆಗ ಸುಧಾಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಗ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಸಚಿವರಾದ ಈಶ್ವರಪ್ಪ, ಜಗದೀಶ್‍ಶೆಟ್ಟರ್ ಅವರು ಸುಧಾಕರ್ ಬೆಂಬಲಿಸಿ ಮಾತನಾಡಿ, ರಮೇಶ್‍ಕುಮಾರ್ ಕ್ಷಮೆಯಾಚಿಸ ಬೇಕು, ಬಳಸಿದ ಶಬ್ದ ಸರಿಯಲ್ಲ ಎಂದು ಹೇಳಿದರು.

ರಮೇಶ್‍ಕುಮಾರ್ ಅವರು ಮಾತನಾಡಿ, ಖರೀದಿ ವಿಚಾರದಲ್ಲಿ ಸಚಿವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ, ಎಲಕ್ಲರೂ ದೇಶಭಕ್ತರೇ, ಒಳ್ಳೆ ಶಬ್ದವಿದ್ದರೆ ಹೇಳಿ ಅದನ್ನೇ ಬಳಸುತ್ತೇನೆ ಎಂದರು. ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಮಾತನಾಡಿ, ರಮೇಶ್‍ಕುಮಾರ್ ಬಳಸಿದ ಶಬ್ದ ಸೌಜನ್ಯವಲ್ಲ , ಆ ಶಬ್ದವನ್ನು ಕಡತದಿಂದ ಹೊರತೆಗೆಯಲಾಗಿದೆ ಎಂದು ರಮೇಶ್‍ಕುಮಾರಂ ಅವರು ತಾವು ಬಳಸಿದ ಶಬ್ದ ಸರಿ ಎಂದು ಹೇಳುತ್ತಿಲ್ಲ , ತಪ್ಪಾಗಿದೆ, ಕ್ಷಮೆ ಕೋರುತ್ತೇನೆ ಎಂದಾಗ ಈ ವಿಷಯದ ಚರ್ಚೆಗೆ ತೆರೆಬಿದ್ದಿತು.

Facebook Comments