‘ರಾಜಕೀಯದಲ್ಲೀಗ ಕುಟುಂಬ ರಾಜಕಾರಣ, ವೈಯಕ್ತಿಕ ಲಾಭವೇ ಮುಖ್ಯವಾಗಿದೆ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27- ಹಿಂದೆ ರಾಜಕೀಯ ಒಡಕುಗಳಿಗೆ ತತ್ವ ಸಿದ್ಧಾಂತಗಳು ಕಾರಣವಾಗಿರುತ್ತಿದ್ದವು. ಆದರೆ ಈಗ ವೈಯಕ್ತಿಕ ಲಾಭ ಮತ್ತು ಕೌಟುಂಬಿಕ ರಾಜಕಾರಣದ ವ್ಯಾಮೋ ಹವೇ ಕಾರಣವಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ರಾಮಚಂದ್ರ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಷ್ಟ್ರಪತಿ ಚುನಾವಣೆ ವೇಳೆ ಇಂದಿರಾಗಾಂಧಿಯವರು, ವಿ.ವಿ.ಗಿರಿ ಅವರನ್ನು ಬೆಂಬಲಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಅವರಿಗೆ ಆತ್ಮಸಾಕ್ಷಿಯ ಮತ ನೀಡಿ ಎಂದು ಇಂದಿರಾಗಾಂಧಿ ಮನವಿ ಮಾಡಿದ್ದರು.

ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವ್‍ರೆಡ್ಡಿ ಸೋಲಿಗೆ ಕಾರಣವಾಗಿದ್ದಕ್ಕಾಗಿ ಎಐಸಿಸಿ ಅಧ್ಯಕ್ಷ ನಿಜಲಿಂಗಪ್ಪ ಅವರು ಇಂದಿರಾಗಾಂಧಿಯವರನ್ನು ಪಕ್ಷದಿಂದ ಉಚ್ಚಾಟಿಸಿದರು. ಆಗಿನ ರಾಜಕೀಯ ಕಲಹಕ್ಕೆ ತತ್ವ ಸಿದ್ದಾಂತ ನೆಪಗಳಿದ್ದವು. ಆದರೆ ಈಗ ಕೇವಲ ವೈಯಕ್ತಿಕ ಲಾಲಸೆಗಳೇ ಹೆಚ್ಚಾಗಿವೆ. ನಾಯಕರ ಭಾಷಣಗಳನ್ನು ಕೇಳಲು ಜನ ಸ್ವಯಂಪ್ರೇರಿತರಾಗಿ ಬರುತ್ತಿದ್ದರು.

ಈಗ ದುಡ್ಡು, ಊಟ, ವಾಹನದ ಸೌಲಭ್ಯಗಳನ್ನು ಕಲ್ಪಿಸಬೇಕು. ಮತದಾರರನ್ನು ಭ್ರಷ್ಟರಾಗಿದ್ದಾರೆ ಎಂದು ದೂಷಿಸುವುದಕ್ಕಿಂತಲೂ ಅವರನ್ನು ಭ್ರಷ್ಟರನ್ನಾಗಿ ಮಾಡಿರುವುದು ನಾವು ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ