ಕಾಂಗ್ರೆಸ್‍ನಲ್ಲಿ ಮೂಲ, ವಲಸಿಗ ಎಂಬುದಿಲ್ಲ: ರಮೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ :  ಒಮ್ಮೆ ಕಾಂಗ್ರೆಸ್ಸಿಗೆ ಕಾಲಿಟ್ಟರೆ ಕಾಂಗ್ರೆಸ್ಸಿಗ ಅಷ್ಟೇ. ಮೂಲ, ವಲಸಿಗ ಎಂಬುದು ಇಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮೂಲ ಕಾಂಗ್ರೆಸ್ಸಿಗರು, ವಲಸಿಗ ಕಾಂಗ್ರೆಸ್ಸಿಗರು ಎಂಬ ಗದ್ದಲದ ವಿಚಾರವನ್ನು ಅಸ್ಪೃಶ್ಯತೆಗೆ ಹೋಲಿಸಿ ಮಾತನಾಡಿ, ನಮ್ಮ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆ ಕಾಯ್ದೆ ಇದೆ.

ಹಾಗೆಂದು ಅಸ್ಪೃಶ್ಯತೆ ಸಂಪೂರ್ಣ ಹೊರಟು ಹೋಗಿದೆಯೇ? ನಮಗೆ ಕಾಣದಂತೆ ಇದೆಯೋ ಇಲ್ಲವೋ? ಹಾಗೆಯೇ ನಮ್ಮಲ್ಲೂ ಅಲ್ಲಲ್ಲಿ ಮೂಲ, ವಲಸಿಗ ಎಂಬ ಮಾತುಗಳು ಕೇಳಿ ಬರುತ್ತವೆ ಎಂದು ಹೇಳಿದರು. ಸದನಕ್ಕೆ ಗೈರು ಹಾಜರಾಗುವ ಶಾಸಕರ ವಿರುದ್ಧ ಹರಿಹಾಯ್ದ ರಮೇಶ್ ಕುಮಾರ್ ಅವರು, ರಾಜ್ಯದ ಏಳು ಕೋಟಿ ಜನರ ಪ್ರತಿನಿಧಿಗಳಾಗಿ 224 ಶಾಸಕರಿದ್ದೇವೆ.

ನಮಗೆ ನಮ್ಮ ಜವಾಬ್ದಾರಿಗಳು ಗೊತ್ತಿರಬೇಕು. ನಾವು ರಾಜ್ಯದ ಜನರ ನಂಬಿಕೆಯ ವಾರಸುದಾರರಾಗಿದ್ದೇವೆ. ಅಧಿವೇಶನದಲ್ಲಿ ಪಾಲ್ಗೊಂಡು ಅರ್ಥಪೂರ್ಣ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ನಮಗೆ ಕೆಲಸ ಇತ್ತು, ಅಲ್ಲಿಗೆ ಹೋಗಬೇಕು, ಇಲ್ಲಿಗೆ ಹೋಗಬೇಕು ಎಂದರೆ ಏನು ಮಾಡಲು ಸಾಧ್ಯ ಎಂದರು.

Facebook Comments