ಎಲ್ಲಾ ವಿವಿಗಳು ವಿದ್ಯಾರ್ಥಿಗಳ ನೆರವಿಗೆ ವಿಶೇಷ ಘಟಕ ಸ್ಥಾಪನೆಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 29-ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಲ್ ನಿಶಾಂಗ್ ನಿನ್ನೆ ದೇಶದ 45,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ವೆಬಿನರ್ ಮೂಲಕ ಸಂವಾದ ನಡೆಸಿದರು.

ದೇಶಾದ್ಯಂತ ಕೊರೊನಾ ವೈರಸ್ ಹಾವಳಿಯಿಂದಾಗಿ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಗೆ ಆಗಿರುವ ಅನಾನುಕೂಲ ಮತ್ತು ಸಮಸ್ಯೆಗಳ ಬಗ್ಗೆ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿ ಕೆಲವು ಸೂಚನೆಗಳನ್ನು ನೀಡಿದರು.

ಕೋವಿಡ್-19 ವೈರಸ್ ಹಾವಳಿಯ ಸಂಕಷ್ಟದಿಂದಾಗಿ ಉದ್ಭವಿಸಿರುವ ಇಂಥ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸೂಕ್ತ ರೀತಿಯಲ್ಲಿ ಇತ್ಯರ್ಥಗೊಳಿಸಲು ದೇಶದ ಪ್ರತಿಯೊಂದು ವಿಶ್ವವಿದ್ಯಾಲಯಗಳಲ್ಲಿಯೂ ವಿಶೇಷ ಘಟಕಗಳನ್ನು ಸ್ಥಾಪಿಸುವಂತೆ ಕೇಂದ್ರ ಸಚಿವರು ಸೂಚನೆ ನೀಡಿದರು.

ರಾಷ್ಟ್ರೀಯ ಮಲ್ಯಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಷನಲ್ ಅಸ್ಸೆಸ್‍ಮೆಂಟ್ ಅಂಡ್ ಅಕ್ರೆಡೇಷನ್ ಕೌನ್ಸಿಲ್-ನ್ಯಾಕ್) ನಡೆಸುವ ಮËಲ್ಯಂಕನ ಪ್ರಕ್ರಿಯೆಯಲ್ಲಿ ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸುವಂತೆ ರಮೇಶ್ ಪೊಕ್ರಿಯಲ್ ನಿಶಾಂಕ್ ಸಲಹೆ ನೀಡಿದರು.

ಈ ಸಂಕಷ್ಟ ಸಮಯದಲ್ಲಿ ವಿದ್ಯಾರ್ಥಿಗಳು ಆನ್‍ಲೈನ್ ಶಿಕ್ಷಣ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಡಿಜಿಟಲ್ ತಂತ್ರಜ್ಞಾನದ ಮೂಲಕ ವ್ಯಾಸಂಗವನ್ನು ಉನ್ನತೀಕರಣಗೊಳಿಸಬೇಕೆಂದು ಅವರು ಸಲಹೆ ಮಾಡಿದರು.  ಈ ನಿಟ್ಟಿನಲ್ಲಿ ನ್ಯಾಕ್ ಕೈಗೊಳ್ಳುತ್ತಿರುವ ಉಪಕ್ರಮಗಳನ್ನು ಸಚಿವರು ಪ್ರಶಂಸಿಸಿದರು.

ದೇಶಾದ್ಯಂತ 45,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಮುಖ್ಯಸ್ಥರೊಂದಿಗೆ ನಡೆದ ಈ ಸಂವಾದವನ್ನು ನ್ಯಾಕ್‍ನ ಬೆಂಗಳೂರು ವಲಯ ವೆಬಿನರ್ ಮೂಲಕ ಆಯೋಜಿಸಿತ್ತು. ಕುಲಾಧಿಪತಿಗಳು, ಉಪ ಕುಲಪತಿಗಳು, ರಿಜಿಸ್ಟ್ರಾರ್‍ಗಳು, ಪ್ರೊಫೆಸರ್‍ಗಳು, ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಣ ತಜ್ಞರು ಈ ಸಂವಾದದಲ್ಲಿ ಭಾಗವಹಿಸಿದ್ದರು.

Facebook Comments