ಟ್ವಿಟರ್‌ನಲ್ಲಿ ಮತ್ತೆ ಆಕ್ಟಿವ್ ಆದ ಪದ್ಮಾವತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.18- ಸ್ಯಾಂಡಲ್‍ವುಡ್‍ನ ಪದ್ಮಾವತಿ, ಮಾಜಿ ಸಂಸದೆ ರಮ್ಯಾ ಟ್ವಿಟರ್‍ನಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಎಲ್ಲಿಯೂ ಕಾಣಿಸಿಕೊಳ್ಳದೆ, ಯಾವುದಕ್ಕೂ ಸ್ಪಂದಿಸದೆ ನಾಪತ್ತೆ ಯಾಗಿದ್ದ ರಮ್ಯ/ದಿವ್ಯಸ್ಪಂದನ ಕಳೆದೆರಡು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಚಾಲ್ತಿಗೆ ಬಂದಿದ್ದರು.

ಇಂದು ಟ್ವಿಟರ್ ಅಕೌಂಟ್ ಆಕ್ಟಿವ್ ಆಗಿದೆ. 2019ರ ಜೂನ್ 1ರಂದು ಕೊನೆಯ ಟ್ವೀಟ್ ಮಾಡಿದ್ದ ರಮ್ಯಾ ಅನಂತರ ನಾಪತ್ತೆಯಾಗಿದ್ದರು. ಅಖಿಲ ಭಾರತ ಕಾಂಗ್ರೆಸ್‍ನ ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆಯಾಗಿದ್ದ ರಮ್ಯ ಅವರ ಟ್ವಿಟರ್ ಹ್ಯಾಂಡಲ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ಫೇಸ್‍ಬುಕ್ ಅಂಕೌಂಟ್ ಇನïಆಕ್ವಿಟ್ ಆಗಿತ್ತು. ಸಾರ್ವಜನಿಕವಾಗಿಯೂ ರಮ್ಯ ಕಾಣಿಸಿಕೊಂಡಿರಲಿಲ್ಲ. ಚಿತ್ರರಂಗದ ಹಿರಿಯ ನಟ ಅಂಬರೀಶ್ ನಿಧನ ರಾದಾಗಲೂ ರಮ್ಯ ಬಂದಿರಲಿಲ್ಲ.

Facebook Comments

Sri Raghav

Admin