ಟ್ವಿಟರ್‌ನಲ್ಲಿ ಕಂಗನಾಗೆ ತಿವಿದ ರಮ್ಯಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಮಾನಸಿಕ ಖಿನ್ನತೆಗೊಳಗಾಗಿರುವವರ ಆರೋಗ್ಯ ಸುಧಾರಣೆಯಲ್ಲಿ ಕೆಲಸ ಮಾಡುತ್ತಿರುವ ಬಾಲಿವುಡ್ ನಟಿ ದೀಪಕಾ ಪಡುಕೋಣೆಯವರನ್ನು ನೋಡಿ ಪಾಠ ಕಲಿಸುವಂತೆ ಕಂಗಾನಾ ರಾಣಾವತ್‍ಗೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸಲಹೆ ನೀಡಿದ್ದಾರೆ.

ಟ್ವಿಟರ್‍ನಲ್ಲಿ ರಮ್ಯಾ ಅವರ ಹೇಳಿಕೆಗಳು ವಿವಾದದ ಕಿಡಿ ಹೊತ್ತಿಸಿದೆ. ಕಂಗನಾ ರಾಣಾವತ್ ಕುರಿತು ಟ್ವಿಟ್ ಮಾಡಿರುವ ರಮ್ಯಾ, ಮಾದಕ ದ್ರವ್ಯ ಹಾನಿಯ ಬಗ್ಗೆ ಏನಾದರೂ ಮಾಡಬೇಕು ಎಂಬ ಮನಸ್ಸು ನಿಮಗಿದ್ದರೆ ಮುಕ್ತವಾಗಿ ಮಾಡಿ.

ಈ ಮೊದಲು ಒಂದು ವಿಡಿಯೋದಲ್ಲಿ ತಾವು ಮಾದಕ ವೆಸನಿಯಾಗಿದ್ದ ಬಗ್ಗೆ ಹೇಳಿಕೊಂಡಿದ್ದೀರಿ. ನಿಮ್ಮಲ್ಲಿ ನಿಜವಾದ ಧೈರ್ಯ ತೋರಿಸಬೇಕಾದರೆ ಮಾದಕ ವೆಸನಿಗಳ ವಿರುದ್ಧ ಸಮರ್ಥ ಹೋರಾಟಗಾರರಾಗಬೇಕು ಎಂದಿದ್ದರೆ ಈ ಹಿಂದೆ ವೆಸನಿಯಾಗಿದ್ದಾಗಿನ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಿ ಮತ್ತು ಅದರಿಂದ ಹೇಗೆ ಹೊರೆಗೆ ಬಂದಿದ್ದಿರಿ ಎಂಬುದರ ಬಗ್ಗೆಯೂ ವಿವರಣೆ ನೀಡಿ.

ಆ ಮೂಲಕ ಮಾದಕ ದ್ರವ್ಯ ಎಷ್ಟು ಕೆಟ್ಟದ್ದು ಎಂಬುದನ್ನು ಸಮಾಜಕ್ಕೆ ಅರ್ಥ ಮಾಡಿಸಿ. ಹಿರಿಯ ನಟ ಸಂಜಯ್‍ದತ್ ಈಗಾಗಲೇ ಆ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.  ಇಬ್ಬರ ನಡುವಿನ ವಿಭಿನ್ನತೆಗಳ ಬಗ್ಗೆ ಮಾತನಾಡುವುದಾದರೆ ನಟಿ ದೀಪಿಕಾ ಪಡುಕೋಣೆ ಅವರು ಮಾನಸಿಕ ಆರೋಗ್ಯದ ಬಗ್ಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಮಾನಸಿಕ ಖಿನ್ನತೆಯಿಂದ ಅನುಭವಿಸಿದ ಯಾಥನೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದೆ ಇವರು ದತ್ತು ಸಂಸ್ಥೆಯೊಂದನ್ನು ಸ್ಥಾಪನೆ ಮಾಡಿ ಖಿನ್ನತೆಯಿಂದ ಬಳಲುತ್ತಿರುವ ಲಕ್ಷಾಂತರ ಮಂದಿಗೆ ನೆರವು ನೀಡುತ್ತಿದ್ದಾರೆ. ಆಕೆಯಿಂದ ಕಲಿಯುವುದು ಬಹಳಷ್ಟು ಇದೆ ಎಂದು ರಮ್ಯಾ ಟಾಂಗ್ ನೀಡಿದ್ದಾರೆ.

ಮಾದಕ ದ್ರವ್ಯದ ವಿರುದ್ಧ ಏನಾದರು ಮಾಡಲೇಬೇಕು ಎಂದಾದರೆ ಕೂಡಲೇ ಕಾರ್ಯಪ್ರವೃತ್ತರಾಗಿ. ಪೊಲೀಸರಿಗೆ ದೂರು ನೀಡಿ. ನಿಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಒದಗಿಸಿ. ಅನಂತರ ಪೊಲೀಸರು ಕೆಲಸ ಮಾಡಲು ಬಿಡಿ. ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ದಳಕ್ಕೆ ಸಹಾಯ ಮಾಡಿದಂತಾಗುತ್ತದೆ.

ನೀವೇನೆ ಮಾಡುವುದಿದ್ದರೂ ಅದನ್ನು ಒಳ್ಳೆಯ ಉದ್ದೇಶದಿಂದ ಮಾಡಿ. ಯಾವುದೋ ಪ್ರತಿಕಾರಕ್ಕಾಗಿ ಮಾಡಬೇಡಿ. ಬದಲಾವಣೆಗಳು ಒಳಗಿನಿಂದಲೇ ಆರಂಭವಾಗಲಿ ಎಂದು ಹೇಳಿದ್ದಾರೆ.

ಮಾದಕ ವಸ್ತುವಿನ ಬಗ್ಗೆ ಜಾಗೃತಿ ಮೂಡಿಸಬೇಕು. ಬಹಳಷ್ಟು ಮಂದಿಗೆ ಈ ವಿಷಯಗಳ ಬಗ್ಗೆ ಗೊತ್ತಿಲ್ಲ. ಆಧ್ಯಾತ್ಮಿಕ ನೆಲೆಯಲ್ಲಿ ವ್ಯಾಸನಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.

Facebook Comments

Sri Raghav

Admin