ಅಂಬಿ ನೆನಪಿನ ಶಕ್ತಿ ನೋಡಿ ಶಾಕ್ ಆಗಿದ್ದ ರಮ್ಯಾ..!

ಈ ಸುದ್ದಿಯನ್ನು ಶೇರ್ ಮಾಡಿ

Ramya--01

ಬೆಂಗಳೂರು, ನ.25-ಅಂಬಿರೀಷ್ ಅದ್ಭುತ ಸ್ಮರಣಶಕ್ತಿಯ ಅನ್ವರ್ಥನಾಮದಂತಿದ್ದರು. ಅವರ ಎಕ್ಸ್‍ಟ್ರಾ ಆರ್ಡಿನರಿ ಮೆಮೊರಿ ಪವರ್‍ಗೆ ಸ್ಯಾಂಡಲ್‍ವುಡ್ ತಾರೆಯರು ಫಿದಾ ಆಗಿದ್ದರು. ಚಿತ್ರರಂಗ ಪ್ರಮುಖರ ಮತ್ತು ರಾಜಕೀಯ ಮುಖಂಡರ ಅನೇಕ ಫೋನ್ ನಂಬರ್‍ಗಳು ಅವರ ಸ್ಮೃತಿಪಟಲದಲ್ಲಿ ದಾಖಲಾಗಿತ್ತು. ಅನೇಕ ಚಿತ್ರಗಳಲ್ಲಿ ನಟಿಸಲು ಸಹಿ ಮಾಡಿದ್ದ ಅಂಬಿಗೆ ಆಯಾ ಚಿತ್ರಗಳ ಶೂಟಿಂಗ್ ಡೇಟ್‍ಗಳಿಗಾಗಿ ಡೈರಿಯನ್ನು ನೋಡುತ್ತಿರಲಿಲ್ಲ. ಆ ಎಲ್ಲ ದಿನಾಂಕ ಮತ್ತು ಸ್ಥಳಗಳ ಬಗ್ಗೆ ಅವರಿಗೆ ಆಗಾಧ ನೆನೆಪಿನ ಶಕ್ತಿ ಇತ್ತು.

ಒಮ್ಮೆ ನಟಿ ರಮ್ಯಾ ಅಂಬರೀಷ್ ಅವರ ಮನೆಯಲ್ಲಿದ್ದಾಗ ಚಿತ್ರೋದ್ಯಮದ ಗಣ್ಯರಿಗೆ ಫೋನ್ ಮಾಡಲು ಡೈರಕ್ಟರಿಯನ್ನು ಕೇಳಿದರು. ಯಾಕಮ್ಮ ಡೈರೆಕ್ಟರಿ? ನಿನಗೆ ಯಾರ ಫೋನ್ ನಂಬರ್ ಬೇಕು ಕೇಳು ನಾನು ಈಗಲೇ ಕೊಡುತ್ತೇನೆ ಎಂದರು. ಅಚ್ಚರಿಗೊಂಡ ರಮ್ಯಾ ಒಂದಿಬ್ಬರ ನಂಬರ್ ಕೇಳಿದರು.

ನೆನೆಪಿನ ಸುರುಳಿ ಬಿಚ್ಚಿ ತಕ್ಷಣ ದೂರವಾಣಿ ಸಂಖ್ಯೆ ನೀಡಿದರು. ಹಿರಿಯ ಅಭಿನೇತನ ಅಸಾಧಾರಣ ನೆನೆಪಿನ ಸಾಮಥ್ರ್ಯ ಕಂಡು ಮತ್ತೆ ಪರೀಕ್ಷೆ ಮಾಡಲು ರಮ್ಯಾ ಇನ್ನೂ ಕೆಲವರ ನಂಬರ್ ಕೇಳಿದರು. ಅವುಗಳನ್ನು ನಿಖರವಾಗಿ ಅಂಬಿ ನೀಡಿದಾಗ ನಟಿ ಚಕಿತರಾದರು.

ಅನೇಕ ನಟ-ನಟಿಯರ ಹುಟ್ಟುಹಬ್ಬದ ದಿನಾಂಕಗಳೂ ಕೂಡ ಗಜೇಂದ್ರನಿಗೆ ತಿಳಿದಿತ್ತು. ಇವರದ್ದು ಪೋಟೋಗ್ರಫಿಕ್ ಮೆಮೋರಿ. ಅವರ ಸ್ಮತಿಪಟಲದಲ್ಲಿ ದಾಖಲಾಗುತ್ತಿದ್ದ ಸಂಗತಿಗಳು ಅಚ್ಚಳಿಯದೇ ಉಳಿಯುತ್ತಿದ್ದವು. ಇದು ಅಂಬಿಗೆ ದೈವದತ್ತ ಕೊಡುಗೆ ಆಗಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin