ಮುಂಬೈ ದಾಳಿ ಸೂತ್ರಧಾರ ಅಮೆರಿಕದಲ್ಲಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜೂ.20- ಮುಂಬೈ ದಾಳಿಯ ಸೂತ್ರಧಾರ ಪಾಕಿಸ್ತಾನಿ ಮೂಲದ ಕೆನಡಿಯನ್ ವಾಣಿಜ್ಯೋದ್ಯಮಿ ತಹಾವುರ್ ರಾನಾ ಅಮೆರಿಕದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಕಳೆದ 2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ 166 ಮಂದಿ ಸವನ್ನಪ್ಪಿದ್ದರು. ಈ ದಾಳಿ ಹಿಂದೆ ರಾನಾನ ಕುಮ್ಮಕ್ಕಿದೆ. ಹೀಗಾಗಿ ಆತನನ್ನು ದೇಶದಿಂದ ಗಡಿಪಾರು ಮಾಡುವಂತೆ ಭಾರತ ಸರ್ಕಾರ ಅಮೆರಿಕಕ್ಕೆ ಮನವಿ ಮಾಡಿಕೊಂಡಿತ್ತು.

ಭಾರತದ ಈ ಮನವಿ ಮೇರೆಗೆ ಲಾಸ್ ಏಂಜಲೀಸ್‍ನಲ್ಲಿ ತಹಾವುರ್ ರಾನಾ ಅವರನ್ನು ಬಂಧಿಸಲಾಗಿದೆ.  ಬಂಧಿಸಲಾಗಿರುವ ರಾನಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಾದ ಆಲಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಜೂ.30ಕ್ಕೆ ಮುಂದೂಡಿದ್ದಾರೆ.

ರಾನಾ ಹಲವಾರು ದೇಶದ್ರೋಹಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅಪಾರ ಜನರ ಸಾವು-ನೋವಿಗೆ ಕಾರಣನಾಗಿದ್ದಾನೆ. ಹೀಗಾಗಿ ಆತನನ್ನು ಬಂಧಿಸಿ ನಮಗೆ ಹಸ್ತಾಂತರಿಸುವಂತೆ ಭಾರತ ಸರ್ಕಾರ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ರಾನಾನನ್ನು ಬಂಧಿಸಲಾಗಿದೆ ಎಂದು ಅಮೆರಿಕ ಸರ್ಕಾರ ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ.

Facebook Comments