ರಣಜಿ ಕ್ವಾಟರ್ ಫೈನಲ್‍ನತ್ತ ಕರ್ನಾಟಕ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ 14- ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಲು ನಿರ್ಣಾಯಕ ಪಂದ್ಯದಲ್ಲಿಬರೋಡಾ ನೀಡಿರುವ 149 ರನ್ ಗುರಿ ಮಟ್ಟಿರುವ ಕರ್ನಾಟಕಕ್ಕೆ ಆರಂಭಿಕ ಆಘಾತವಾಗಿದೆ.
ಸರಣಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಮಾಡಿದ್ದ ಆರ್‍ಸಿಬಿ ಆಟಗಾರ ದೇವದತ್ತ ಪಡಿಕ್ಕಲ್ ಎರಡನೇ ಇನ್ನಿಂಗ್ಸ್‍ನಲ್ಲೂ 6 ರನ್‍ಗಳಿಗೆ ಭಾರ್ಗವ್ ಭಟ್‍ಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರೂ ನಾಯಕ ಕರುಣ್‍ನಾಯರ್ ಹಾಗೂ ಸಮರ್ಥ್ ತಂಡವನ್ನು ಕ್ವಾಟರ್‍ಫೈನಲ್ಸ್‍ಗೇರಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

2ನೆ ದಿನದಾಟದ ಅಂತ್ಯಕ್ಕೆ 208 ರನ್ ಗಳಿಸಿದ್ದ ಬರೋಡಾ ಇಂದು ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣರ ಬೌಲಿಂಗ್ ದಾಳಿಗೆ ಸಿಲುಕಿ 296 ರನ್‍ಗಳಿಗೆ ಅಲೌಟಾಗುವ ಮೂಲಕ ಕರ್ನಾಟಕಕ್ಕೆ 149 ರನ್‍ಗಳ ಗುರಿ ನೀಡಿದರು. ಬರೋಡಾ ಪರ ಇಂದು ಅಭಿಮನ್ಯು ಸಿಂಗ್ (52 ರನ್, 8 ಬೌಂಡರ) ಹಾಗೂ ಪಿ.ಎಸ್.ಕೊಹ್ಲಿ (42 ರನ್, 3 ಬೌಂಡರಿ, 1 ಸಿಕ್ಸರ್) ರನ್ ಹಿಗ್ಗಿಸುವ ಜವಾಬ್ದಾರಿಯನ್ನು ಹೊತ್ತರೂ ಪ್ರಸಿದ್ಧ ಕೃಷ್ಣ ಬರೋಡಾದ ರನ್ ದಾಹಕ್ಕೆ ಲಗಾಮು ಹಾಕಿದರು.

ಕರ್ನಾಟಕದ ಪರ ಪ್ರಸಿದ್ಧ ಕೃಷ್ಣ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ರೋನಿತ್ ಮೋರೆ 3, ಕೃಷ್ಣಪ್ಪ ಗೌತಮ್ 2, ಅಭಿಮನ್ಯು ಮಿಥುನ್ 1 ವಿಕೆಟ್ ಕೆಡವಿದರು.
ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಕರ್ನಾಟಕ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದ್ದು ಸಮರ್ಥ್ (15 ರನ್, 2 ಬೌಂಡರಿ) ಹಾಗೂ ಕರುಣ್‍ನಾಯರ್(10 ರನ್, 1 ಬೌಂಡರಿ) ಕ್ರೀಸ್‍ನಲ್ಲಿದ್ದರು.

Facebook Comments