ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ರಣಬೀರ್-ಆಲಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಡಿ.1- ಬಾಲಿವುಡ್‍ನಲ್ಲಿ ಮತ್ತೆ ಸೆಲಬ್ರೆಟಿಗಳ ಮದುವೆ ಸುದ್ದಿ ಜೋರು ಸದ್ದು ಮಾಡುತ್ತಿದೆ. ಈ ಬಾರಿ ಪ್ರಚಾರಕ್ಕೆ ಬಂದಿರುವುದು ರಣಬೀರ್ ಕಪೂರ್ ಹಾಗೂ ಆಲಿಯಾಭಟ್ ಜೋಡಿ..! ಈಗಾಗಲೇ ಈ ಜೋಡಿಯು ನಿಶ್ಚಿತಾರ್ಥ ಮಾಡಿಕೊಂಡಿದ್ದರೆ ಎಂಬ ಸುದ್ದಿಗಳು ದಟ್ಟವಾಗಿ ಹರಿದಾಡುತ್ತಿರುವಾಗಲೇ ಸದ್ಯದಲ್ಲೇ ಈ ಜೋಡಿಯು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದು ಈಗ ಆಲಿಯಾ 32 ಕೋಟಿಯ ಐಷಾರಾಮಿ ಅಪಾರ್ಟ್‍ಮೆಂಟ್ ಖರೀದಿಸಿರುವುದು ಅವರ ಮದುವೆಗೆ ಮತ್ತಷ್ಟು ಇಂಬುಕೊಟ್ಟಿದೆ.

ಮುಂಬೈನ ಬಾಂದ್ರಾ ಬಳಿಯ ಪಾಲಿ ಹಿಲ್ಸ್‍ನಲ್ಲಿ ರಣಬೀರ್ ಈಗಾಗಲೇ ಐಷಾರಾಮಿ ಅಪಾರ್ಟ್‍ಮೆಂಟ್ ಅನ್ನು ಖರೀದಿಸಿದ್ದು ಈಗ ಅದೇ ಅಪಾರ್ಟ್‍ಮೆಂಟ್‍ನಲ್ಲೇ ಅಲಿಯಾ ಕೂಡ ಭವ್ಯ ಬಂಗಲೆಯನ್ನು ಖರೀದಿಸಿರುವುದು ಇವರ ವಿವಾಹಕ್ಕೆ ಮತ್ತಷ್ಟು ಪುಷ್ಠಿ ಕೊಟ್ಟಂತಾಗಿದೆ.

ಸದ್ಯ ರಣಬೀರ್ ಕಪೂರ್ ಹಾಗೂ ಅಲಿಯಾಭಟ್ ಅವರು ಬ್ರಹ್ಮಾಸ್ತ್ರ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದು ಈ ಚಿತ್ರದ ಚಿತ್ರೀಕರಣದ ನಂತರ ಈ ಜೋಡಿಯು ಮದುವೆ ಶಾಸ್ತ್ರದೊಳಗೆ ಬಂಧಿಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

Facebook Comments