ಉಪ ಚುನಾವಣೆ ನಂತರ ಆರ್.ಆರ್. ನಗರದಲ್ಲಿಕೊರೋನಾ ರ್ಯಾಂಡಮ್ ಟೆಸ್ಟ್
ಬೆಂಗಳೂರು,ನ.3- ಉಪಚುನಾವಣೆ ಮುಗಿದ ನಂತರ ಆರ್ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ರ್ಯಾಂಡಮ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು. ಆರ್ಆರ್ ನಗರಕ್ಕೆ ಭೇಟಿ ನೀಡಿ ಚುನಾವಣಾ ಸಿದ್ದತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ವೋಟ್ ಮಾಡಿದ ನಂತರ ಸೋಂಕು ತಗುಲಬಹುದು ಎಂದು ಮತದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಮತದಾನದ ನಂತರ ರ್ಯಾಂಡಮ್ ಟೆಸ್ಟ್ಗೆ ನಿರ್ಧರಿಸಲಾಗಿದೆ. ಉಪಚುನಾವಣೆ ಮುಗಿದ ಮೇಲೆ ಸಾಮೂಹಿಕ ತಪಾಸಣೆ ಮಾಡಲಾಗುವುದು ಎಂದು ಅವರು ಹೇಳಿದರು. ನಾಳೆ ಉಪಚುನಾವಣೆ ನಡೆಯುವ ಹಿನ್ನಲೆಯಲ್ಲಿ ಚುನಾವಣೆ ಸಿದ್ದತೆ ಬಗ್ಗೆ ಅವರು ಪರಿಶೀಲನೆ ನಡೆಸಿದರು. ಮಸ್ಟರಿಂಗ್ ಕೇಂದ್ರಕ್ಕೆ ತೆರಳಿ ಅಲ್ಲೂ ಕೂಡ ಪರಿಶೀಲನೆ ನಡೆಸಿದರು.
ಕ್ಷೇತ್ರಾದ್ಯಂತ ಚುನಾವಣಾ ಪ್ರಚಾರ ಭಾರೀ ಬಹಿರಂಗ ರ್ಯಾಲಿ, ಮೆರವಣಿಗೆಯಲ್ಲಿ ಸಾಕಷ್ಟು ಜನ ಪಾಲ್ಗೊಂಡ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಸಹಜವಾಗಿಯೇ ಎದುರಾಗಿದೆ.