ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಕರ್ನಾಟಕ

ಈ ಸುದ್ದಿಯನ್ನು ಶೇರ್ ಮಾಡಿ

ರಾಜಕೋಟ್ , ಜ. 13- ಅನುಭವಿ ಆಟಗಾರರ ಕೊರತೆಯಿಂದಾಗಿ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕ ಇನ್ನಿಂಗ್ಸ್ ಹಿನ್ನಡೆ ಭೀತಿ ಎದುರಿಸುತ್ತಿದೆ.
ಮೊದಲೆರಡು ದಿನಗಳಲ್ಲಿ ಸೌರಾಷ್ಟ್ರದ ಬ್ಯಾಟ್ಸ್‍ಮನ್‍ಗಳಾದ ಚೇತೇಶ್ವರ ಪೂಜಾರ ಹಾಗೂ ಶೆಲ್ಡನ್ ಜಾಕ್ಸನ್ ಅವರು ಹರಿಸಿದ ರನ್‍ಗಳ ಸುರಿಮಳೆಯಿಂದ ತಂಡವು 581 ಬೃಹತ್ ಮೊತ್ತ ಗಳಿಸಿದರೆ, ಕರ್ನಾಟಕ ತಂಡದ ಆಟಗಾರರು ರನ್ ಗಳಿಸಲು ಪರದಾಡುತ್ತಿದ್ದಾರೆ.

ಪಂದ್ಯದ 2ನೆ ದಿನದಾಟದ ಅಂತ್ಯಕ್ಕೆ ಸ್ಫೋಟಕ ಆಟಗಾರ ದೇವೇಂದ್ರ ಪಡಿಕಲ್ (0)ರ ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಇಂದು ಭೋಜನ ವಿರಾಮಕ್ಕೂ ಮುನ್ನವೇ ರೋಹನ್ ಕದಮ್ (29 ರನ್, 5 ಬೌಂಡರಿ), ಕೆ.ವಿ.ಸಿದ್ಧಾರ್ಥ್ (0 ರನ್)ರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಬಂದ ಪವನ್ ದೇಶಪಾಂಡೆ ಕೂಡ (8ರನ್)ಗಳಿಗೆ ತನ್ನ ಆಟ ಮುಗಿಸಿದರು. ಪತ್ರಿಕೆ ಮುದ್ರಣಕ್ಕೆ

ಹೋಗುವ ವೇಳೆಗೆ ಕರ್ನಾಟಕ 83 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಆರ್.ಸಮರ್ಥ್ (35 ರನ್, 3 ಬೌಂಡರಿ) ಹಾಗೂ ನಾಯಕ ಶ್ರೇಯಸ್ ಗೋಪಾಲ್ (9 ರನ್, 1 ಸಿಕ್ಸರ್) ಕ್ರೀಸ್‍ನಲ್ಲಿದ್ದರು.

Facebook Comments