ಕರ್ನಾಟಕ ಬೌಲರ್‌ಗಳ ದಾಳಿಗೆ ನಡುಗಿದ ಬರೋಡಾ, 85ಕ್ಕೆ ಸರ್ವಪತನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12- ರಣಜಿ ಪಂದ್ಯಾವಳಿಯ ನಾಕೌಟ್ ಹಂತಕ್ಕೇರಲು ಪ್ರಮುಖವಾಗಿದ್ದ ಬರೋಡಾ ಪಂದ್ಯದಲ್ಲಿ ಕರ್ನಾಟಕದ ಬೌಲರ್‍ಗಳು ಪ್ರಾಬಲ್ಯ ಮೆರೆದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ರಣಜಿ ಲೀಗ್‍ನ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ಆಯ್ಕೆ ಮಾಡಿಕೊಂಡ ಕರ್ನಾಟಕದ ನಾಯಕ ಕರುಣ್‍ನಾಯರ್‍ರ ರಾಜ್ಯದ ಬೌಲರ್‍ಗಳು ಬರೋಡಾ ತಂಡವನ್ನು 85 ರನ್‍ಗಳಿಗೆ ಮೊದಲ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸುವ ಮೂಲಕ ನಾಯಕನ ಮೊಗದಲ್ಲಿ ನಗೆಮೂಡಿಸಿದ್ದಾರೆ.

ಬರೋಡಾ ತಂಡದ ಪರ ಆರಂಭಿಕರಾಗಿ ಕ್ರೀಸ್‍ಗಿಳಿದ ಕೇದಾರ್ ದೇವದಾರ್‍ರನ್ನು ವೇಗಿ ಪ್ರಸಿದ್ಧ ಕೃಷ್ಣ 3 ರನ್‍ಗಳಿಗೆ ಕಟ್ಟಿ ಹಾಕಿದರು. ನಂತರ ಮೈದಾನಕ್ಕಿಳಿದ ವಿಷ್ಣು ಸೋಲಂಕಿ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‍ಗೆ ಅಟ್ಟಿದರು.

ಅರ್ಧಶತಕ ವಂಚಿತ ಪಠಾಣ್: ಕರ್ನಾಟಕದ ವೇಗದ ಹಾಗೂ ಸ್ಪಿನ್ ಬೌಲರ್‍ಗಳ ದಾಳಿಗೆ ಸಿಲುಕಿ ಬರೋಡಾದ ಬ್ಯಾಟ್ಸ್‍ಮನ್‍ಗಳು ಮಾರ್ಚ್‍ಫಸ್ಟ್ ಮಾಡುತ್ತಿದ್ದರೆ, ಮೈದಾನಕ್ಕೆ ಅಂಟಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದ ಆರಂಭಿಕ ಆಟಗರ ಎ.ಎ. ಪಠಾಣ್ 8 ಬೌಂಡರಿಗಳ ನೆರವಿನಿಂದ 45 ರನ್‍ಗಳನ್ನು ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾಗಲೇ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಬೌಲಿಂಗ್‍ನಲ್ಲಿ ಪವನ್ ದೇಶಪಾಂಡೆ ಹಿಡಿದ ಅದ್ಭುತ ಕ್ಯಾಚಿಗೆ 9ನೇ ಆಟಗಾರನಾಗಿ ಮೈದಾನ ತೊರೆದರು.

ಎರಡಂಕಿ ದಾಟದ 8 ಆಟಗಾರರು: ಕರ್ನಾಟಕದ ಬೌಲರ್‍ಗಳ ಬೌಲಿಂಗ್ ಅಸ್ತ್ರಕ್ಕೆ ಸಿಲುಕಿದ ಬರೋಡಾ ತಂಡದ ಪರ ಪಠಾಣ್ (45 ರನ್), ದೀಪಕ್ ಹೂಡ (20 ರನ್, 3 ಬೌಂಡರಿ) ಬಿಟ್ಟರೆ ಯಾವ ಆಟಗಾರರೂ ಎರಡಂಕಿಯನ್ನು ಮುಟ್ಟಲಿಲ್ಲ. ಆರಂಭಿಕ ಆಟಗಾರ ಕೇದಾರ್ ಹಾಗೂ ವಿಕೆಟ್ ಕೀಪರ್ ಬೋಶಾಲೆ ತಲಾ 3 ರನ್ ಗಳಿಸಿದರೆ, ಅಂತಿಮ ಬ್ಯಾಟ್ಸ್‍ಮನ್‍ಗಳಾಗಿ ಕಣಕ್ಕಿಳಿದ ಸೋಮ್‍ಪ್ರಿಯಾ ಹಾಗೂ ಬಿ.ಎ.ಪಠಾಣ್ ತಲಾ 6 ರನ್‍ಗಳಿಸಿದರು.

ನಾಯಕ ಕೇದಾರ್ ಪಾಂಡ್ಯಾ, ಅಭಿಮನ್ಯುಸಿಂಗ್, ವಿಷ್ಣು ಸೋಲಂಕಿ, ಭಾರ್ಗವ್ ಭಟ್ ಶೂನ್ಯ ರನ್ ಸಂಪಾದಿಸಿದ್ದರಿಂದ ಬರೋಡಾ ತಂಡದ ಮೊತ್ತವು ಮೂರಂಕಿಯನ್ನು ದಾಟದೆ 33.5 ಓವರ್‍ಗಳಿಗೆ 85 ರನ್‍ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು.

ಕರ್ನಾಟಕ ತಂಡದ ಪರ ಅಭಿಮನ್ಯುಮಿಥನ್ 26 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಕೃಷ್ಣಪ್ಪಗೌತಮ್ 25 ರನ್‍ಗಳಿಗೆ 3 ವಿಕೆಟ್, ಪ್ರಸಿದ್ಧ ಕೃಷ್ಣ 2, ಶ್ರೇಯಾಸ್ ಗೋಪಾಲ್ 1 ವಿಕೆಟ್ ಕಬಳಿಸಿದರು.
ಕರ್ನಾಟಕ ಉತ್ತಮ ಹೋರಾಟ:
ಬರೋಡಾ ಮೊದಲ ಇನ್ನಿಂಗ್ಸ್ ನಲ್ಲಿ 85 ರನ್‍ಗಳಿಗೆ ಸರ್ವಪತನವಾದ ಮೈದಾನಕ್ಕಿಳಿದ ಕರ್ನಾಟಕದ ಆರಂಭಿಕ ಆಟಗಾರರಾದ ಆರ್.ಸಮರ್ಥ್ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಹೋರಾಟ ಮಾಡುತ್ತಿದ್ದಾರೆ.

Facebook Comments