ಅಭಿಮನ್ಯು ಮಿಥುನ್ ರೋಚಕ ಆಟ, ಕರ್ನಾಟಕಕ್ಕೆ ಮುನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.13- ಬರೋಡಾ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ ಬೌಲಿಂಗ್‍ನಲ್ಲಿ ಮಿಂಚಿದ್ದ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಅವರು ದ್ವಿತೀಯ ದಿನ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸುವ ಮೂಲಕ ಕರ್ನಾಟಕ ತಂಡಕ್ಕೆ 148 ರನ್‍ಗಳ ಮುನ್ನಡೆ ತಂದುಕೊಟ್ಟಿದ್ದಾರೆ.

ನಿನ್ನೆ ದಿನದಾಟದ ಅಂತ್ಯಕ್ಕೆ 80 ರನ್‍ಗಳ ಮುನ್ನಡೆ ಸಾಧಿಸಿದ್ದ ಕರ್ನಾಟಕ ಇಂದು ಶರತ್ (34 ರನ್, 6 ಬೌಂಡರಿ) ಹಾಗೂ ಅಭಿಮನ್ಯು ಮಿಥುನ್ (40 ರನ್, 6 ಬೌಂಡರಿ)ರ ಸಮಯೋಚಿತ ಆಟದ ನೆರವಿನಿಂದಾಗಿ 233 ರನ್‍ಗಳನ್ನು ಗಳಿಸುವ ಮೂಲಕ ಮೊದಲ ಇನ್ನಿಂಗ್ಸ್‍ನಲ್ಲಿ 148 ರನ್‍ಗಳ ಮುನ್ನಡೆ ಕಾಯ್ದುಕೊಂಡರು.

ಬರೋಡಾ ವಿರುದ್ಧ ಮಾರಕ ಬೌಲಿಂಗ್ ಪ್ರದರ್ಶಿಸಿದ ಸೌಂಪ್ರಿಯಾ 5 ವಿಕೆಟ್ ಕಬಳಿಸಿದರೆ, ಅಭಿಮನ್ಯು ಸಿಂಗ್, ಭಾರ್ಗವ್ ಭಟ್ 2, ನಾಚಯಕ ಕೇದಾರ್ ಪಾಂಡ್ಯ 1 ವಿಕೆಟ್ ಅನ್ನು ಕಬಳಿಸಿದರು.  ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಬರೋಡಾ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 2ವಿಕೆಟ್ ನಷ್ಟಕ್ಕೆ 48 ರನ್‍ಗಳನ್ನು ಗಳಿಸಿದ್ದು, ಪಠಣ್ (25 ರನ್, 3 ಬೌಂಡರಿ, 1 ಸಿಕ್ಸರ್), ದೀಪಕ್ ಹೂಡಾ ಕ್ರೀಸ್‍ನಲ್ಲಿದ್ದರು. ಕೃಷ್ಣಪ್ಪ ಗೌತಮ್, ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್ ಕೆಡವಿದ್ದರು.

Facebook Comments