ಅತ್ಯಾಚಾರವೆಸಗಲು ಪ್ರಯತ್ನಿಸಿ, ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿ ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಷಾಜಹಾನ್‍ಪುರ (ಯುಪಿ), ಫೆ.24 (ಪಿಟಿಐ)- ಕಾಲೇಜು ವಿದ್ಯಾರ್ಥಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲು ಪ್ರಯತ್ನಿಸಿ ವಿಫಲರಾದ ನಂತರ ವಿದ್ಯಾರ್ಥಿಗಳು ಆಕೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿ ಸುಟ್ಟಬಟ್ಟೆಯಲ್ಲಿ ಉತ್ತರ ಪ್ರದೇಶದ ಷಾಜಹಾನ್‍ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಟ್ಟೆ ಇಲ್ಲದೆ ತೀವ್ರವಾಗಿ ಸುಟ್ಟುಹೋದ ಗಾಯಗಳಲ್ಲಿ ದೊರೆತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ರಾಯ್ ಖೇಡಾ  ಗ್ರಾಮದ ಸಮೀಪದ ಹೊಲದಲ್ಲಿ ಸೋಮವಾರ ನಡೆದಿದ್ದು, ಮೂವರು ವ್ಯಕ್ತಿಗಳು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದು, ಅದರಲ್ಲಿ ಯಶಸ್ವಿಯಾಗದಿದ್ದಾಗ ನನ್ನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು ಎಂದು ವಿದ್ಯಾರ್ಥಿನಿ ತನಿಖಾಧಿಕಾರಿಗಳಿಗೆ ವಿವರಿಸಿದ್ದಾರೆ. ಬಿಎ ಎರಡನೇ ವರ್ಷದಲ್ಲಿ ಓದುತ್ತಿರುವ ಸಂತ್ರಸ್ತೆಗೆ ಶೇ.60 ರಷ್ಟು ಸುಟ್ಟುಗಾಯಗಳಾಗಿದ್ದು, ಚಿಕಿತ್ಸೆಗಾಗಿ ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ವಿದ್ಯಾರ್ಥಿನಿ ಆಗಾಗ್ಗೆ ತಮ್ಮ ಹೇಳಿಕೆಗಳನ್ನು ಬದಲಾಯಿಸುತ್ತಿರುವುದು ಕಂಡುಬಂದಿದೆ.

ವಿದ್ಯಾರ್ಥಿನಿ ತನ್ನ ಕಾಲೇಜು ಕಟ್ಟಡದ ಮೂರನೇ ಮಹಡಿಯಿಂದ ಅವಳು ಹೇಗೆ ಆಸ್ಪತ್ರೆಗೆ ತಲುಪಿದಳು ಎಂಬುದು ಮಾತ್ರ ತಿಳಿದುಬಂದಿಲ್ಲ. ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೆÇಲೀಸರು ಹೇಳಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ, ಕೇಂದ್ರ ಮಾಚಿ ಸಚಿವ ಸ್ವಾಮಿ ಚಿನ್ಮಯಾನಂದ ಅವರು ನಡೆಸುತ್ತಿರುವ ಕಾಲೇಜಿನ ವಿದ್ಯಾರ್ಥಿನಿ. ಆದರೆ, 3ನೇ ಮಹಡಿಯಿಂದ ಏಕಾಂಗಿಯಾಗಿ ಕೆಳಗೆ ಬರುತ್ತಿರುವುದು ಕಂಡುಬಂದಿದೆ.

ಅವುಗಳ ಸಹಾಯದಿಂದ ನಡೆಸಿದ ತನಿಖೆಯಲ್ಲಿ ಬಾಲಕಿ ಕಾಲೇಜು ಆವರಣಕ್ಕೆ ಪ್ರವೇಶಿಸಿದ ಸುಮಾರು 20 ನಿಮಿಷಗಳ ನಂತರ ಮುರಿದ ಹೊರಗಿನ ಗೋಡೆಯಿಂದ ಹೊರಗೆ ಹೋಗಿದ್ದಾಳೆ. ಅಲ್ಲದೆ, ಕಾಂಗಿಯಾಗಿ ಕಾಲುವೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು ಎಂದು ತಿಳಿದುಬಂದಿದೆ ಎಂದು ಜಿಲ್ಲಾ ಎಸ್ಪಿ ಎಸ್. ಆನಂದ ಹೇಳಿದ್ದಾರೆ.

ಅದಕ್ಕೂ ಮುನ್ನಾ ವಿದ್ಯಾರ್ಥಿನಿ ತನ್ನ ಸ್ನೇಹಿತರೊಂದಿಗೆ ತರಗತಿಯ ಹೊರಗೆ ಮಾತನಾಡುತ್ತಿರುವುದು ಮತ್ತು ಗ್ರಂಥಾಲಯಕ್ಕೆ ಭೇಟಿ ನೀಡುವುದು ಕಂಡುಬಂದಿದೆ ಎಂದು ಎಸ್ಪಿ ಹೇಳಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.

Facebook Comments