ಅತ್ಯಾಚಾರ ಆರೋಪಕ್ಕೆ ಗುರಿಯಾದ ವಿದ್ಯಾರ್ಥಿ ಐಐಟಿಯಿಂದ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹಟಿ,ಸೆ.25- ಐಐಟಿ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿರುವ ವಿದ್ಯಾರ್ಥಿಯನ್ನು ಹೊರದಬ್ಬಲಾಗಿದೆ. ಗುವಾಹಟಿ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಸಹಪಾಠಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಕ್ಕೆ ಗುರಿಯಾಗಿದ್ದ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಕ್ಯಾಂಪಸ್‍ನ ಸಿಂಡಿಕೇಟ್ ಸದಸ್ಯರು ಆರೋಪಿಯನ್ನು ಕ್ಯಾಂಪಸ್‍ನಿಂದ ಉಚ್ಚಾಟಿಸುವ ತೀರ್ಮಾನ ಕೈಗೊಂಡಿತ್ತು. ಸಿಂಡಿಕೇಟ್ ತೀರ್ಮಾನದಂತೆ ಅತ್ಯಾಚಾರಿ ವಿದ್ಯಾರ್ಥಿಯನ್ನು ಐಐಟಿಯಿಂದ ಹೊರ ಕಳುಹಿಸುವ ತೀರ್ಮಾನ ಕೈಗೊಂಡಿದ್ದೇವೆ. ಇದುವರೆಗೂ ಕ್ಯಾಂಪಸ್‍ನಲ್ಲಿ ಇಂತಹ ದುರ್ಘಟನೆ ನಡೆದಿರಲಿಲ್ಲ. ಹೀಗಾಗಿ ಇಂತಹ ಕಠಿಣ ತೀರ್ಮಾನ ಕೈಗೊಂಡಿದ್ದೇವೆ.

ಈಗಾಗಲೆ ವಿದ್ಯಾರ್ಥಿಯನ್ನು ಹೊರ ಹಾಕಿರುವುದರಿಂದ ಈ ಕುರಿತಂತೆ ಹೆಚ್ಚಿನ ಮಾತಿ ನೀಡಲು ಸಾಧ್ಯಲ್ಲ ಎಂದು ಐಐಟಿ ವಕ್ತಾರರು ತಿಳಿಸಿದ್ದಾರೆ. ಕಳೆದ ಮಾರ್ಚ್ 28ರಂದು ವಿದ್ಯಾರ್ಥಿಯನ್ನು ಬಂಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆದರೆ, ನ್ಯಾಯಾಲಯ ಆರೋಪಿ ಮತ್ತು ಸಂತ್ರಸ್ಥೆ ಇಬ್ಬರು ಪ್ರತಿಭಾವಂತರಾಗಿರುವುದರಿಂದ ಅವರ ಭಷ್ಯ ಹಾಳಾಗಬಾರದು ಎಂಬ ಕಾರಣದಿಂದ ಜಾಮೀನು ಮಂಜೂರು ಮಾಡಿತ್ತು.

Facebook Comments