ರೇಪ್ ಮಾಡಿ ಕೊಲ್ಲುವ ಮುನ್ನ ಪ್ರಿಯಾಂಕಾಗೆ ನರಕದರ್ಶನ ಮಾಡಿಸಿದ್ದ ಕಾಮುಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಡಿ.1-ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಹೈದರಾಬಾದ್‍ನ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರಿಗೆ ಕೆಲವು ಆಘಾತಕಾರಿ ಅಂಶಗಳು ಪತ್ತೆಯಾಗಿವೆ.

ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಅವರಿಗೆ ಚಿತ್ರಹಿಂಸೆ ನೀಡಿ ಗ್ಯಾಂಗ್‍ರೇಪ್ ಮಾಡಿ ಜೀವಂತ ದಹನ ಮಾಡುವುದಕ್ಕೂ ಮುನ್ನ ಕಾಮುಕರು ಅವರಿಗೆ ಬಲವಂತವಾಗಿ ಮದ್ಯ ಕುಡಿಸಿದ್ದರು ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ.

ಈ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶಗಳನ್ನು ತಿಳಿಸಿದ್ದಾರೆ.  ಶಂಶಾಬಾದ್ ಪ್ರದೇಶದಲ್ಲಿ ಇಪ್ತತ್ತೇಳು ವರ್ಷದ ಪಶುವೈದ್ಯೆಯ ಮೇಲೆ ದುಷ್ಕರ್ಮಿಗಳು ಸಾಮೂಹಿತ ಅತ್ಯಾಚಾರ ಎಸಗಿ ಜೀವಂತ ದಹನ ಮಾಡಲಾದ ಕೃತ್ಯದ ಬಗ್ಗೆ ದುಷ್ಕರ್ಮಿಗಳು ವಿಚಾರಣೆ ವೇಳೆ ನೀಡಿರುವ ಸಂಗತಿಗಳನ್ನು ಪೊಲೀಸರು ಎಫ್‍ಐಆರ್ ವರದಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪಶುವೈದ್ಯೆ ಮೇಲೆ ನಡೆದ ಪೈಶಾಚಿಕ ಗ್ಯಾಂಗ್‍ರೇಪ್ ಮತ್ತು ಬರ್ಬರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.  ಈ ಮಧ್ಯೆ, ಡಾ ಪ್ರಿಯಾಂಕಾ ರೆಡ್ಡಿ ಕಣ್ಮರೆಯಾದ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

Facebook Comments