2 ವರ್ಷದ ಬಾಲಕಿ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಘಾಜಿಯಾಬಾದ್, ಏ.8- ಎರಡು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ತೊದಲು ಮಾತನಾಡುವ ಅಪ್ರಾಪ್ತ ಬಾಲಕನನ್ನು ಉತ್ತರ ಪ್ರದೇಶದ ಲೋನಿಯಲ್ಲಿ ಬಂಧಿಸಲಾಗಿದೆ. ಸಂತ್ರಸ್ಥ ಬಾಲಕಿಯೊಂದಿಗೆ ಆಕೆಯ ಮನೆಯ ಟೆರೆಸ್‍ನಲ್ಲಿ ಆಟವಾಡುತ್ತಿದ್ದಾಗ ಆತ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಾಕಿ ಕಿರುಚಾಡಿದಾಗ ಮನೆಯೊಳಗೆ ಕೆಲಸದಲ್ಲಿತೊಡಗಿದ್ದ ಆಕೆಯ ತಾಯಿ ಮತ್ತು ತಾತ ಟೆರೆಸ್‍ಗೆ ಬಂದು ನೋಡಿದಾಗ ಅಪ್ರಾಪ್ತ ಅತ್ಯಾಚಾರ ನಡೆಸಿರುವುದು ಗೊತ್ತಾಯಿತು. ತಾಯಿ-ತಾತ ಬರುತ್ತಿದ್ದಂತೆ ಬಾಲಕ ಪರಾರಿಯಾಗಿದ್ದು ಸಂತ್ರಸ್ಥೆಯ ತಾಯಿ ನೀಡಿದ ದೂರಿನ ಮೇರೆಗೆ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.

Facebook Comments